Thursday, July 2, 2026
Homeಕ್ರೈಮ್ಬೀದರ್‌ನಲ್ಲಿ ಗುಂಡಿನ ಮೊರೆತ - ಎಟಿಎಂ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಆಗಂತುಕರು..! -...

ಬೀದರ್‌ನಲ್ಲಿ ಗುಂಡಿನ ಮೊರೆತ – ಎಟಿಎಂ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಆಗಂತುಕರು..! – ಇಬ್ಬರ ಸಾವು

Telegram Group
Join Now

ಬೀದರ್‌ : ಎಟಿಎಂಗೆ ಹಣ ಹಾಕಲು ಬಂದಿದ್ದ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆದಿದೆ. ನಗರದ ಎಸ್‌ಬಿಐ ಎದುರು ಈ ಘಟನೆ ನಡೆದಿದ್ದು, ಏಜೆನ್ಸಿಯ ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಏಜೆನ್ಸಿಯ ವೆಂಕಟೇಶ್‌ ಎಂಬವರು ಸ್ಥಳದಲ್ಲಿ ಮೃತಪಟ್ಟಿದ್ದರೆ, ಶಿವಕುಮಾರ್‌ ಎಂಬವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗುಂಡಿನ ದಾಳಿ ನಡೆಸಿ, ಆ ಬಳಿಕ ಉಳಿದ ಸಿಬ್ಬಂದಿ ಮೇಲೆ ಕಣ್ಣಿಗೆ ಖಾರದ‌ ಪುಡಿ ಎರಚಿ ಹಣ ಕದ್ದೊಯ್ದಿದ್ದಾರೆ. ಎಟಿಎಂಗೆ ಹಾಕಲು ಪಿಎಸ್‌ಸಿ ವಾಹನದಲ್ಲಿ ಲಕ್ಷಾಂತರ ರೂ. ಹಣ ತರಲಾಗಿತ್ತು. ಸಿಬ್ಬಂದಿ ಬ್ಯಾಂಕ್‌ ಎದುರುಗಡೆ ತಮ್ಮ ವಾಹನ ನಿಲ್ಲಿಸಿ, ಎಟಿಎಂ ಹಣ ತುಂಬಲು ವಾಹನದ ಡೋರ್‌ ತೆಗೆಯುತ್ತಿದ್ದಂತೆ ಅವರ ಮೇಲೆ ಐದು ಸುತ್ತು ಗುಂಡಿನ ದಾಳಿಯಾಗಿದೆ. ಈ ವೇಳೆ ಸಿಬ್ಬಂದಿಯ ಕಣ್ಣಿಗೆ ಖಾರದ ಪುಡಿ ಎರಚಲಾಗಿದೆ. ದಾಳಿ ನಡೆದ ಬಳಿಕ ೯೩ ಲಕ್ಷ ರೂ. ಹಣವಿದ್ದ ಪೆಟ್ಟಿಗೆಯನ್ನು ಬೈಕ್ನಲ್ಲಿ ಹೊತ್ತೊಯ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಜಿಲ್ಲಾ ಎಸ್‌ಪಿ ಪ್ರದೀಪ್ ಗುಮಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದೆ. ೨೪ ಗಂಟೆಯೊಳಗೆ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments