ಚಿಕ್ಕಮಗಳೂರು : ಎರಡು ದಿನದ ಮಗುವನ್ನ ಹೆತ್ತ ತಾಯಿಯೇ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಗಳೂರು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.
ಚಂದ್ರಮ್ಮ ಎಂಬವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಹಸುಗೂಸನ್ನು ಬಿಟ್ಟು ಹೋಗಿದ್ದಾಳೆ. ಬೆಳಗ್ಗಿನ ಜಾವ 6 ಗಂಟೆ ಸಮಯದಲ್ಲಿ ಮಗು ಅಳುವ ಸದ್ದು ಕೇಳಿಸಿದ. ಪಕ್ಕದ ಮನೆಯ ಚಂದ್ರಮ್ಮ ಯಾರದೋ ಮಗು ಅಳ್ಳುತ್ತಿರಬೇಕೆಂದು ಸುಮ್ಮನಾಗಿದ್ದಾರೆ. ಬಹಳ ಸಮಯ ಕಳೆದರೂ ಮಗುವಿನ ಅಳು ನಿಲ್ಲದಿದ್ದಾಗ ತನ್ನ ಮಗಳನ್ನು ಜೊತೆಗೆ ಬಂದು ನೋಡಿದ್ದಾರೆ. ಈ ವೇಳೆ ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಮೂಲೆಯಲ್ಲಿ ಅಳುತ್ತಿರುವ ಮಗುವನ್ನು ಕಂಡಿದ್ದಾರೆ. ಅಲ್ಲಿಂದ ಮಗುವನ್ನು ರಕ್ಷಣೆ ಮಾಡಿ ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ಬಳಿಕ ವೈದ್ಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ.
ಸ್ವಲ್ಪ ಸಮಯ ಕಳೆದಿದ್ದರೆ ಹಸುಗೂಸು ಶ್ವಾನಗಳ ದಾಳಿಗೆ ಒಳಗಾಗುತ್ತಿತ್ತು ಅಂತ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಎಳೆಯ ಜೀವವನ್ನು ತೋಟದಲ್ಲಿ ಬಿಟ್ಟು ಹೋಗಿ ಅಮಾನವೀಯತೆ ತೋರಿದ ತಾಯಿಗೆ ಹಿಡಿಶಾಪ ಹಾಕಿದ್ದಾರೆ. ಇಲಾಖೆ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಹೆತ್ತೊಡಲಿಗೆ ಬೇಡವಾದ ಕಂದಮ್ಮ – ಎರಡು ದಿನದ ಮಗುವನ್ನು ಕಾಫಿ ತೋಟದಲ್ಲಿ ಎಸೆದ ಪಾಪಿ ತಾಯಿ..!
RELATED ARTICLES
