Tuesday, March 31, 2026
Homebig breakingದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ನೇಣಿಗೆ ಕೊರಳೊಡ್ಡಿದ ಯುವಕ..!

ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ನೇಣಿಗೆ ಕೊರಳೊಡ್ಡಿದ ಯುವಕ..!

ನೆಲಮಂಗಲ : ದಪ್ಪಗಿರುವುದಕ್ಕೆ ಹುಡುಗಿ ಸಿಗುತ್ತಿಲ್ಲವೆಂದು ಯುವಕ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ನಾರಾಯಣಪ್ಪನಪಾಳ್ಯದಲ್ಲಿ ನಡೆದಿದೆ. ಆಟೋ ಚಾಲಕನಾಗಿದ್ದ ವೆಂಕಟೇಶ್(29) ಮೃತ ವ್ಯಕ್ತಿ. ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ.
ಗೋವಿಂದರಾಜು-ಮಂಗಳಮ್ಮ ದಂಪತಿ ಪುತ್ರನಾಗಿರುವ ವೆಂಕಟೇಶ್​ ಮದುವೆಯಾಗಲು ಹಲವು ಹುಡುಗಿಯರನ್ನು ನೋಡಿದ್ದ. ಆದರೆ ಆತ ದಪ್ಪಗಿದ್ದಾನೆ ಎಂಬ ಕಾರಣಕ್ಕೆ ಆತನನ್ನು ನಿರಾಕರಿಸಿದ್ದರು. ಇದರಿಂದ ಮನನೊಂದು ನೇಣಿಗೆ ಶರಣಾಗಿರುವುದಾಗಿ ಎನ್ನಲಾಗಿದೆ. ಎಷ್ಟೇ ಫೋನ್‌ ಮಾಡಿದರೂ ಆತ ಸ್ವೀಕರಿಸಿರಲಿಲ್ಲ. ಹೀಗಾಗಿ ಅನುಮಾನಗೊಂಡು ಆತನ ಕೋಣೆಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!