Tuesday, March 31, 2026
Homebig breakingಲಕ್ಷ್ಮೀ ಹೆಬ್ಬಾಳ್ಕರ್‌ಗೆ ನಿಂದನೆ ಕೇಸ್‌ - ವಾಯ್ಸ್‌ ಸ್ಯಾಂಪಲ್‌ ನೀಡಲು ಸಿ.ಟಿ. ರವಿಗೆ ಸೂಚಿಸಿದ ಹೈಕೋರ್ಟ್..!‌

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನಿಂದನೆ ಕೇಸ್‌ – ವಾಯ್ಸ್‌ ಸ್ಯಾಂಪಲ್‌ ನೀಡಲು ಸಿ.ಟಿ. ರವಿಗೆ ಸೂಚಿಸಿದ ಹೈಕೋರ್ಟ್..!‌

ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಶಬ್ಧದಿಂದ ನಿಂದಿಸಿದ ಪ್ರಕರಣ ಸಂಬಂಧ ವಾಯ್ಸ್‌ ಸ್ಯಾಂಪಲ್‌ ನೀಡುವಂತೆ ಎಂಎಲ್ಸಿ ಸಿ.ಟಿ. ರವಿಗೆ ರಾಜ್ಯ ಹೈಕೋರ್ಟ್‌ ಸೂಚನೆ ನೀಡಿದೆ.
​ ಸಿಟಿ ರವಿ ಅವಾಚ್ಯ ಪದ ಬಳಸಿರೋದು ಸಿಐಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ. ಹೀಗಾಗಿ ಧ್ವನಿ ಸ್ಯಾಂಪಲ್‌ ಪರೀಕ್ಷೆಗೆ ಸಿಐಡಿ ಮುಂದಾಗಿತ್ತು. ಆದರೆ ಸಿ.ಟಿ.ರವಿ ವಾಯ್ಸ್ ಸ್ಯಾಂಪಲ್ ನೀಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಸಿ.ಟಿ.ರವಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ತಿಳಿಸಿದ್ದರು. ಜನವರಿ 17ರಂದು ಕೋರ್ಟ್‌ಗೆ ಹಾಜರಾದ ಸಿ.ಟಿ. ರವಿ ಪರ ವಕೀಲರು, ರವಿಯವರಿಗೆ ಒಂದೇ ದಿನ ಎರಡು ನೋಟಿಸ್ ನೀಡಿದ್ದಾರೆ ಎಂದು ಕೋರ್ಟ್​ಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನಿಮಗೆ ಅಕ್ಷೇಪಣೆ ಇದ್ದರೆ ಸಲ್ಲಿಸಿ. ಇಲ್ಲ‌ವಾದಲ್ಲಿ ಅದೇಶ ಮಾಡುತ್ತೇನೆ. ಹೋಗಿ ವಾಯ್ಸ್ ಸ್ಯಾಂಪಲ್‌ ನೀಡಿ. ವಾಟ್ಸಪ್​ನಲ್ಲಿ ನೊಟೀಸ್ ಬಂದಿದೆ ಎನ್ನುತ್ತೀರಿ. ನೀವು ಹೇಗೆ ಹಾಜರಾಗಿದ್ದೀರಿ? ಎಂದು ಪ್ರಶ್ನಿಸಿತು. ನಾಳೆ ನೀವು ತಿಳಿಸಬೇಕು. ಇಲ್ಲವಾದಲ್ಲಿ ಅದೇಶ ಮಾಡಲಾಗುತ್ತೆ ಕೋರ್ಟ್ ಖಡಕ್ ಆಗಿ ಹೇಳಿದೆ.
‌ ದಯವಿಟ್ಟು ಬೇರೆ ದಿನ ಕೊಡಿ ಎಂದು ರವಿ ಪರ ವಕೀಳರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಕೋರ್ಟ್, ಯಾಕೆ ನಿಮಗೆ ಬೇರೆ ದಿನ ಬೇಕು ಎಂದು ಪ್ರಶ್ನಿಸಿದೆ. ಇದಕ್ಕೆ ನಮಗೆ ಇನ್ನೂ ಫೈಲ್ ಸಿಕ್ಕಿಲ್ಲ ಎಂದು ಸಿಟಿ ರವಿ ಪರ ವಕೀಲರು ತಿಳಿಸಿದರು. ನಂತರ ಕೋರ್ಟ್, ಇಂದೇ ಅವರಿಗೆ ಕಾಪಿ ಕೊಡಿ ಎಂದು ಸಿಐಡಿ ಅಧಿಕಾರಿಗಳಿಗೆ ಸೂಚಿಸಿತು. ಬೇಕಿದ್ರೆ ವಾಯ್ಸ್ ಸ್ಯಾಂಪಲ್ ಕೊಡಿ. ವಿಚಾರಣೆಗೆ ದಿನಾಂಕ ಐಓ ಹತ್ತಿರ ಕೇಳಿಕೊಳ್ಳಿ ಎಂದರು. ಇದರೊಂದಿಗೆ ಇದೀಗ ಸಿಟಿ ರವಿಗೆ ತಮ್ಮ ವಾಯ್ಸ್ ಸ್ಯಾಂಪಲ್​ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!