Friday, October 16, 2026
Homeಜಿಲ್ಲಾಸುದ್ದಿಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ - ಕಡಿಮೆಗೆ ಸಿಗುತ್ತಿದ್ದ ಬಿಯರ್‌ಗೆ ಟ್ಯಾಕ್ಸ್‌ ಹಾಕಿದ

ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ – ಕಡಿಮೆಗೆ ಸಿಗುತ್ತಿದ್ದ ಬಿಯರ್‌ಗೆ ಟ್ಯಾಕ್ಸ್‌ ಹಾಕಿದ

Telegram Group
Join Now

ಬೆಂಗಳೂರು : ಕರ್ನಾಟಕ ಸರ್ಕಾರ ದಿನನಿತ್ಯ ಒಂದಿಲ್ಲೊಂದು ವಿಚಾರದಲ್ಲಿ ಬೆಲೆ ಏರಿಕೆ ಮಾಡುತ್ತಾ ಜನರಿಗೆ ಶಾಕ್‌ ಕೊಡ್ತಿದೆ. ಈಗ ಮದ್ಯ ಪ್ರಿಯರು ಶಾಕ್‌ ಆಗುವ ಸರದಿ..!
ಕರ್ನಾಟಕದಲ್ಲಿ ಬಿಯರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಜನಸಾಮಾನ್ಯರ ಪಾಲಿಗೆ ಕೈಗೆಟುಕುತ್ತಿದ್ದ 300 ರೂ. ಒಳಗಿದ್ದ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿ ಆಯ್ದ ಹಲವು ಬಿಯರ್‌ಗಳ ಮೇಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.
ಕಳೆದೊಂದು ವರ್ಷದಲ್ಲಿ ಬಿಯರ್‌ ದರ ಏರಿಕೆಯಾಗುತ್ತಿರುವುದು ಇದು ಮೂರನೇ ಬಾರಿ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಬಾರಿ ದರ ಏರಿಕೆ ಮಾಡಿದಂತಾಗಿದೆ. ಲಜೆಂಡ್‌ ಬಿಯರ್‌ ರೇಟ್ 100 ರೂಪಾಯಿ ಇತ್ತು. ಈಗ 45 ರೂಪಾಯಿ ಏರಿಕೆಯಾಗಿದೆ. ಪವರ್‌ಕೂಲ್‌ ಬಿಯರ್‌ಗೆ 130 ರೂಪಾಯಿ ಇತ್ತು, ಈಗ ೨೫ ರೂ ಏರಿಕೆ ಮಾಡಿದ್ದು, 155 ರೂಪಾಯಿಗೆ ಹೆಚ್ಚಳವಾಗಿದೆ.
ಬ್ಲ್ಯಾಕ್‌ ಫೋರ್ಟ್‌ ಬಿಯರ್‌ಗೆ 15 ರೂಪಾಯಿ ಹೆಚ್ಚಳವಾಗಿದ್ದು, ಬಾಟಲ್‌ಗೆ 160 ರೂಪಾಯಿ ಆಗಿದೆ. ಹಂಟರ್‌ ಬಿಯರ್‌ನ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದೆ.

ಸರ್ಕಾರದ ಈ ಕ್ರಮಕ್ಕೆ ಮದ್ಯ ಪ್ರಿಯರು ಆಕ್ರೋಶ ಹೊರಹಾಕುತ್ತಿದ್ದಾರೆ. ಗಂಡಸರಿಗೆ ಟ್ಯಾಕ್ಸ್‌ ಹಾಕಿ ಮಹಿಳೆಯರಿಗೆ ಉಚಿತ ರೀತಿ ಕೊಡ್ತಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!