ಬೆಂಗಳೂರು : ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ವಕೀಲ ಜಗದೀಶ್ ಅರೆಸ್ಟ್ ಆಗಿದ್ದಾರೆ. ಕೊಡಿಗೆಹಳ್ಳಿಯಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ಪ್ರರಕಣ ಸಂಬಂಧ ಪೊಲೀಸರು ಜಗದೀಶ್‌ನನ್ನ ಬಂಧಿಸಿದ್ದಾರೆ.
ಕಳೆದೆರೆಡು ದಿನದಿಂದ ಕೊಡಿಗೆಹಳ್ಳಿಯ ಕೆಲ ಯುವಕರು ಮತ್ತು ಜಗದೀಶ್ ಮಧ್ಯೆ ನಿರಂತರ ಗಲಾಟೆ ನಡೆಯುತ್ತಿತ್ತು. ಅಣ್ಣಮ್ಮ ಕೂರಿಸುವ ಸಂಬಂಧ ರಸ್ತೆ ಬ್ಲಾಕ್ ಮಾಡಿದ್ದಾರೆ ಅಂತ ಜಗದೀಶ್ ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೋ ಮಾಡಿದ್ದರು. ಅಲ್ಲಿಂದ ಶುರುವಾದ ಗಲಾಟೆ ನಿನ್ನೆ ಜಗದೀಶ್ ಮೂಗು, ಬಾಯಲ್ಲಿ ರಕ್ತ ಬರುವ ಹಾಗೆ ಹಲ್ಲೆ ನಡೆಸುವ ಹಂತಕ್ಕೆ ತಲುಪಿತ್ತು. ಪದೇ ಪದೇ ಫೇಸ್ಬುಕ್ ಲೈವ್ ಬಂದು ವಾರ್ನಿಂಗ್ ಮಾಡ್ತಿದ್ದ ಜಗದೀಶ್‌ಗೆ ನಿನ್ನೆ ರಾತ್ರಿ ಸಾರ್ವಜನಿಕರ ಗುಂಪು ನಡು ರಸ್ತೆಯಲ್ಲೇ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಈ ಗಲಾಟೆ ವೇಳೆ ಆತನ ಪುತ್ರ, ಗನ್ ಮ್ಯಾನ್‌ಗಳ ಮೇಲೂ ಜನ ಹಲ್ಲೆ ಮಾಡಿದ್ದರು. ಜಗದೀಶ್ ವಾಹನವನ್ನೂ ಧ್ವಂಸ ಮಾಡಿದ್ದರು. ಇದಾದ ನಂತರ ಎಂಟ್ರಿ ಕೊಟ್ಟ ಪೊಲೀಸರು ಜಗದೀಶ್, ಪುತ್ರ ಆರ್ಯನ್, ಇಬ್ಬರು ಗನ್ ಮ್ಯಾನ್‌ಗಳನ್ನು ಬಂಧಿಸಿದ್ದಾರೆ. ಜಗದೀಶ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ.
