Monday, August 4, 2025
!-- afp header code starts here -->
Homebig breakingಪ್ರತಿನಿತ್ಯ ಕುಡಿದು ಹಿಂಸೆ ಕೊಡುತ್ತಿದ್ದ ಗಂಡಂದಿರು - ಪತಿಯರ ಕಾಟದಿಂದ ಬೇಸತ್ತು ಪರಸ್ಪರ ಮದುವೆಯಾದ ಮಹಿಳೆಯರು..!

ಪ್ರತಿನಿತ್ಯ ಕುಡಿದು ಹಿಂಸೆ ಕೊಡುತ್ತಿದ್ದ ಗಂಡಂದಿರು – ಪತಿಯರ ಕಾಟದಿಂದ ಬೇಸತ್ತು ಪರಸ್ಪರ ಮದುವೆಯಾದ ಮಹಿಳೆಯರು..!

ಗೋರಖ್​ಪುರ : ಪತಿ ಪತ್ನಿಯರ ನಡುವೆ ಸಾಮರಸ್ಯದ ಕೊರತೆ ಉಂಟಾದಾಗ, ಸಂಸಾರದ ತಾಳಮೇಳ ತಪ್ಪಿದಾಗ ಇಬ್ಬರು ವಿಚ್ಛೇದನ ಮಾಡಿಕೊಳ್ಳೋದನ್ನ ನೋಡಿದ್ದೇನೆ. ವಿಚ್ಛೇದನದ ನಂತರ ಬೇರೊಬ್ಬರ ಜೊತೆಗೆ ವಿವಾಹವಾಗುವುದನ್ನೂ ನೋಡಿದ್ದೇವೆ. ಅದೇ ಥರ ಇಲ್ಲೊಂದು ಪ್ರಕರಣದಲ್ಲಿ ಗಂಡ ಹೆಂಡತಿ ನಡುವೆ ವಿರಸವೇರ್ಪಟ್ಟು, ಪತ್ನಿ ಬೇರೊಂದು ವಿವಾಹವಾಗಿದ್ದಾಳೆ. ಆದ್ರೆ ಬೇರೆ ಪುರುಷನ ಜೊತೆಗಲ್ಲ… ಬದಲಾಗಿ ಮಹಿಳೆಯ ಜೊತೆಗೆ..!
ಅರೆ, ಮಹಿಳೆ ಜೊತೆಗೆ ಮಹಿಳೆ ಮದುವೆಯಾಗಿದ್ದಾ ಅಂತ ಅಚ್ಚರಿಯಾಗುತ್ತೆ ಅಲ್ವಾ… ಆದ್ರೆ ಇದು ನಂಬಲೇಬೇಕಾದ ವಿಚಾರ. ಇದು ಆಗಿರೋದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ. ಗಂಡಂದಿರ ಅತಿಯಾದ ಮದ್ಯಸೇವನೆಯಿಂದ ಬೇಸತ್ತ ಇಬ್ಬರು ಮಹಿಳೆಯರು ಮನೆ ಬಿಟ್ಟು ಬಂದಿದ್ದರು. ನಂತರ ದೇವಾಲಯದಲ್ಲಿ ಮದುವೆಯಾಗಿದ್ದಾರೆ.
ಇಬ್ಬರು ಮಹಿಳೆಯರು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದರು. ಆರು ವರ್ಷದಿಂದ ಸ್ನೇಹಿತರಾಗಿದ್ದು, ತಮ್ಮ ನೋವನ್ನ ಪರಸ್ಪರ ಹಂಚಿಕೊಳ್ಳುತ್ತಿದ್ದರಂತೆ. ಕೊನೆಗೆ ತಾವಿಬ್ಬರು ಏಕೆ ಮದುವೆಯಾಗಬಾರದು ಅಂತ ಯೋಚಿಸಿ, ಒಂದಾಗುವ ನಿರ್ಧಾರಕ್ಕೆ ಬಂದಿದ್ದಾರೆ.
ಕವಿತಾ ಮತ್ತು ಗುಂಜಾ(ಬಬ್ಲು) ಪರಸ್ಪರ ವಿವಾಹವಾದ ಮಹಿಳೆಯರು. ದಿಯೋರಿಯಾದ ಚೋಟಿ ಕಾಶಿ ಶಿವನ ದೇವಾಲಯದಲ್ಲಿ ವಿವಾಹವಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸ್ನೇಹಿತರಾಗಿ, ಸ್ನೇಹ ಪ್ರೀತಿಯಾಗಿ, ಈಗ ಮದುವೆಯಾಗಿದ್ದಾರೆ. ಇಬ್ಬರು ಕೂಡಾ ಗಂಡಂದಿರ ಮದ್ಯ ಸೇವನೆಯ ಚಟದಿಂದ ನೊಂದಿದ್ದರು ಅನ್ನೋದು ಗಮನಾರ್ಹ.
ಇತ್ತೀಚಿನ ದಿನದಲ್ಲಿ ಈ ಸಮಾಜ ಏನೇನೋ ವಿಚಾರಗಳನ್ನ ನೋಡುವಂತಾಗಿದೆ. ಪುರುಷರು ಪುರುಷರನ್ನೇ ಮದುವೆಯಾಗೋದು, ಮಹಿಳೆಯರು ಮಹಿಳೆಯರನ್ನೇ ಮದುವೆಯಾಗೋದು ಒಂದು ರೀತಿಯಲ್ಲಿ ಹೊಸ ಟ್ರೆಂಡ್‌ ಆಗಿದೆ. ಆದ್ರೆ ಇವರು ಮಕ್ಕಳನ್ನ ಹೇಗೆ ಪಡೆಯುತ್ತಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!