Monday, August 4, 2025
!-- afp header code starts here -->
Homebig breakingPinki Killing me, She want My death - ವ್ಯಕ್ತಿ ಆತ್ಮಹತ್ಯೆ ಕಾರಣ ಕೇಳಿದ್ರೆ...

Pinki Killing me, She want My death – ವ್ಯಕ್ತಿ ಆತ್ಮಹತ್ಯೆ ಕಾರಣ ಕೇಳಿದ್ರೆ ಶಾಕ್‌ ಆಗ್ತೀರಾ..!

ಹುಬ್ಬಳ್ಳಿ : ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ಬೆಳಕಿಗೆ ಬಂದಿದೆ. ಪೀಟರ್‌ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕೆಲ ದಿನಗಳಿಂದ ಪತಿ ಪೀಟರ್​, ಪತ್ನಿ ಪಿಂಕಿ ನಡುವೆ ಜಗಳವಾಗುತ್ತಿತ್ತು. ಈ ನಡುವೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು, ಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯಬೇಕಿತ್ತು. ಈ ಮಧ್ಯೆಯೇ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಹೆಂಡತಿ ಟಾರ್ಚರ್ ನಿಂದ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ʼಡ್ಯಾಡಿ ಆಯಮ್ ಸಾರಿ. ಪಿಂಕಿ(ಹೆಂಡತಿ) ಇಸ್ ಕಿಲ್ಲಿಂಗ್ ಮೀ, ಶೀ ವಾಂಟ್ ಮೈ ಡೆಥ್ ಎಂದುʼ ಪತ್ರದಲ್ಲಿ ಬರೆದಿದ್ದಾನೆ. ಪೀಟರ್‌ ಶವಪೆಟ್ಟಿಗೆಯಲ್ಲೂ ʼಹೆಂಡತಿ ಕಾಟ ತಾಳಲಾರದೆ ಸತ್ತʼ ಎಂದು ಬರೆಯಲಾಗಿದೆ.
ಪಿಂಕಿ ಖಾಸಗಿ ಶಾಲೆ‌‌ ಶಿಕ್ಷಕಿಯಾಗಿದ್ದಳು. ಇತ್ತೀಚಿಗೆ ಬೇರೆ ವ್ಯಕ್ತಿ ‌ಜೊತೆಗೆ ಸಂಬಂಧ ಹೊಂದಿದ್ದು, ಇದನ್ನು ಕುಟುಂಸ್ಥರು ಪ್ರಶ್ನಿಸಿದ್ದಕ್ಕೆ. ಈ ವಿಚಾರವಾಗಿ ಕುಟುಂಬಸ್ಥರೊಂದಿಗೂ ಗಲಾಟೆಯಾಗಿತ್ತು. ವಿಚ್ಚೇದನಕ್ಕೆ ಅರ್ಜಿ ಹಾಕಿದ್ದ ಆಕೆ ಜೀವನಾಂಶವಾಗಿ 20 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಳೆಂಬ ಆರೋಪ ಕೇಳಿಬಂದಿದೆ.
ಬೇರೊಬ್ಬನೊಂದಿಗೆ ಸಂಬಂಧ ವಿಚಾರ ತಿಳಿದ ಬಳಿಕ ಕಳೆದ ಎಂಟು ತಿಂಗಳಿಂದ ಇಬ್ಬರು ದೂರವಾಗಿದ್ದರು. ನಂತರ ಜೀವನಾಂಶ ವಿಚಾರವಾಗಿ ಪೀಡಿಸುತ್ತಿದ್ದು, ಇದರಿಂದಾಗಿಯೇ ಮನನೊಂದು ಪೀಟರ್ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸಾವಿಗೂ ಮುನ್ನ ಡೆತ್ ನೋಟ್ ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಮನವಿ ಮಾಡಿದ್ದ. ಪತ್ನಿ ಕಿರುಕುಳದಿಂದ ಸಾವನ್ನಪ್ಪಿದ ಗಂಡ‌ ಪೀಟರ್ ಸಾವಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!