ಚಿಕ್ಕಮಗಳೂರು : ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಆಟಾಟೋಪಕ್ಕೆ ಸರ್ಕಾರವೇನೋ ಮೂಗುದಾರ ಹಾಕೋದಕ್ಕೆ ಮುಂದಾಗಿದೆ. ಆದ್ರೆ ಇವರ ಹಾವಳಿ ಮಾತ್ರ ನಿಲ್ಲುತ್ತಿಲ್ಲ. ಈ ನಡುವೆ ಇದನ್ನೆ ಬಳಸಿಕೊಂಡು ವಂಚಿಸುವ ಜಾಲವೂ ಹುಟ್ಟಿಕೊಂಡಿದೆ.
ತನ್ನನ್ನ ತಾನು ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಎಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಆಲ್ದೂರು ನಿವಾಸಿ ಸಂತೋಷ್ ಬಂಧಿತ ವ್ಯಕ್ತಿ. ಹಲವು ಮಹಿಳೆಯರಿಗೆ ಲೋನ್ ಕೊಡಿಸುವುದಾಗಿ ಹೇಳಿ ವಂಚಿಸಿದ ಸಂಬಂಧ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ಸಂಬಂಧ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರು ಪೊಲೀಸರು ಸಂತೋಷ್‌ನನ್ನ ಬಂಧಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
ಮೈಕ್ರೋ ಫೈನಾನ್ಸ್ ಮ್ಯಾನೇಜರ್ ಅಂತ ಹೇಳಿಕೊಂಡಿದ್ದ ಸಂತೋಷ್ ಚಿಕ್ಕಮಗಳೂರಿನ ಮಂಜುಳಾ ಎಂಬವರಿಗೆ ೪ ಲಕ್ಷ ರೂ. ವಂಚಿಸಿದ್ದ. ಹಳೆಯ ಸಾಲವನ್ನು ತೀರಿಸಿದರೆ ೧೦ ಲಕ್ಷ ಲೋನ್ ಕೊಡಿಸುವುದಾಗಿ ಸಂತೋಷ್ ಹೇಳಿದ್ದಾನೆ. ಅದರಂತೆ ಮಂಜುಳಾ ಬ್ಯಾಂಕ್‌ನಿಂದ ೪ ಲಕ್ಷ ರೂ. ಸಾಲ ಮಾಡಿ ಸಂತೋಷ್‌ಗೆ ನೀಡಿದ್ದಾರೆ. ಆದರೆ ಆತ ಸಾಲ ತೀರಿಸದೆ, ವಂಚಿಸಿದ್ದ.
ಈ ನಡುವೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ಹಾಗೂ ಮೈಕ್ರೋ ಫೈನಾನ್ಸ್ ಕಂಪನಿ ಮಹಿಳೆಯನ್ನು ಒತ್ತಾಯಿಸುತ್ತಿತ್ತು. ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಬಂದಿದ್ದಾಗ ಅಲ್ಲಿಗೂ ಫೈನಾನ್ಸ್ ಸಿಬ್ಬಂದಿ ಬಂದು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ಕೊಟ್ಟಿದ್ದಾರೆ ಅಂತ ಮಹಿಳೆ ಆರೋಪಿಸಿದ್ದಾರೆ. ಅನೇಕರಿಗೆ ಇದೇ ರೀತಿಯಲ್ಲಿ ಸಂತೋಷ್ ವಂಚಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಪೊಲೀಸ್ ತನಿಖೆಯಿಂದ ವಿಚಾರ ಹೊರಬರಬೇಕಿದೆ.
ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮಹಿಳೆಗೆ ವಂಚನೆ – ವಂಚಕನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು..!
RELATED ARTICLES