ಬಳ್ಳಾರಿ : ರಾಜ್ಯದಲ್ಲಿ ಬಾಣಂತಿಯರ ಸಾವಿಗೆ ಕೊನೆಯೇ ಇಲ್ಲದಂತಾಗಿದೆ. ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವಾಗಿದೆ. ಎರಡು ದಿನ ಅಂತರಲ್ಲಿ ಇಬ್ಬರು ಬಾಣಂತಿಯರು ಬಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದ ರೇಷ್ಮಾ ಬಿ(25) ಮೃತ ಬಾಣಂತಿ.
ಜನವರಿ 4 ರೇಷ್ಮಾ ಬಿಮ್ಸ್ಗೆ ದಾಖಲಾಗಿದ್ದರು. ನಾರ್ಮಲ್ ಹೆರಿಗೆ ಆಗುತ್ತೆ ಅಂತ ವೈದ್ಯರು ಹೇಳಿದ್ದಾರೆ. ಹಾಗಾಗಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದಾರೆ. ಎರಡು ದಿನದ ಬಳಿಕ ಜನವರಿ 6 ರಂದು ನಾರ್ಮಲ್ ಹರಿಗೆ ಕಷ್ಟ, ಹೀಗಾಗಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಬೇಕು ಅಂತ ಹೇಳಿ ಆಪರೇಷನ್ ಮಾಡಿದ್ದಾರೆ. ಬಳಿಕ ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗುವಿನ ಆರೋಗ್ಯ ಚೆನ್ನಾಗಿದೆ ಅಂತ ವೈದ್ಯರು ಮಾಹಿತಿ ಕೊಟ್ಟಿದ್ದಾರೆ.
ಜನವರಿ 8 ರಂದು ತಾಯಿ ಮಗುವನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಅದರೆ, ಮನೆಗೆ ಹೋಗಿ ವಾರದ ಬಳಿಕ ರೇಷ್ಮಾಗೆ ಆಯಾಸ, ಉಸಿರಾಟದ ಸಮಸ್ಯೆ ಕಂಡು ಬಂದಿದೆ. ಜನವರಿ 14 ರಂದು ಮತ್ತೆ ಬಿಮ್ಸ್ ಆಸ್ಪತ್ರೆಗೆ ಬಾಣಂತಿ ರೇಷ್ಮಾರನ್ನು ದಾಖಲು ಮಾಡಿದ್ದಾರೆ. 21 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ರೇಷ್ಮ ಮೃತಪಟ್ಟಿದ್ದಾರೆ.
ರೇಷ್ಮಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಅಂತ ಪೋಷಕರು ಆರೋಪಿಸಿದ್ದಾರೆ. ಮೊದಲಿಗೆ ಎಲ್ಲಾ ನಾರ್ಮಲ್ ಇದೆ. ರೇಷ್ಮಾ ದೇಹ ಆರೋಗ್ಯವಾಗಿದೆ ಅಂತ ಹೇಳಿದ್ರು. ಆದ್ರೆ ಕುಟುಂಬಸ್ಥರು ಒತ್ತಾಯಿಸಿದ ಮೇರೆಗೆ ಸ್ಕ್ಯಾನಿಂಗ್ ಮಾಡಿದಾಗ, ಸಿಜರಿಯನ್ ಬಳಿಕ ರೇಷ್ಮಾರ ಲಂಗ್ಸ್ ವೀಕ್, ಹಾರ್ಟ್ ವೀಕ್, ಕಿಡ್ನಿ ವೈಫಲ್ಯವಾಗಿರುವುದು ಗೊತ್ತಾಗಿದೆ. ಆಗ ಎಚ್ಚೆತ್ತ ವೈದ್ಯರು ತುರ್ತು ಚಿಕಿತ್ಸೆಗೆ ಮುಂದಾಗಿದ್ದಾರೆ. ಅಷ್ಟೊತ್ತಿಗಾಗಲೇ ರೇಷ್ಮಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಯಾವ ಚಿಕಿತ್ಸೆಗೂ ಸ್ಪಂದಿಸದೆ ರೇಷ್ಮಾ ಕೊನೆಯುಸಿರೆಳೆದಿದ್ದಾರೆ.
ಎರಡು ದಿನದ ಹಿಂದೆ ಭಾನುವಾರ ಕುರಗೋಡು ತಾಲೂಕಿನ ಕೋಳೂರು ಗ್ರಾಮದ ಮಹಾದೇವಿ(21) ಎಂಬ ಬಾಣಂತಿ ಸಾವಾಗಿತ್ತು. ಈ ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಾಣಂತಿಯರ ಜೀವಕ್ಕೆ ಬಿಮ್ಸ್ನಲ್ಲಿಲ್ಲ ಗ್ಯಾರಂಟಿ – ಎರಡು ದಿನ ಅಂತರದಲ್ಲಿ ಇಬ್ಬರು ಕೊನೆಯುಸಿರು – ಇನ್ನೂ ಎಚ್ಚೆತ್ತುಕೊಂಡಿಲ್ಲ ಸರ್ಕಾರ..!
RELATED ARTICLES