Monday, August 4, 2025
!-- afp header code starts here -->
Homebig breakingದಿಢೀರ್‌ ಆಗಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದ ಕಿಚ್ಚ ಸುದೀಪ್‌ - ಕಾರಣವೇನು ಗೊತ್ತಾ..?

ದಿಢೀರ್‌ ಆಗಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದ ಕಿಚ್ಚ ಸುದೀಪ್‌ – ಕಾರಣವೇನು ಗೊತ್ತಾ..?

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಪ್ರತಿ ದಿನವೂ ಹಲವು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಕಿಚ್ಚ ಸುದೀಪ್‌ ಗುರುವಾರ ಭೇಟಿಯಾಗಿದ್ದಾರೆ.
ಆದ್ರೆ ಸುದೀಪ್‌ ಭೇಟಿ ನೀಡಿದ್ದು ರಾಜಕಾರಣದ ಬಗ್ಗೆ ಚರ್ಚಿಸೋದಕ್ಕೆ ಅಲ್ಲ, ಕ್ರಿಕೆಟ್‌ ಟೂರ್ನಮೆಂಟ್‌ಗೆ ಆಹ್ವಾನಿಸೋದಕ್ಕೆ. ಸಿನೆಮಾ ಮಂದಿ ಬ್ಯಾಟ್‌, ಬಾಲ್‌ ಹಿಡಿದು ಮೈದಾನಕ್ಕಿಳಿಯುವ ಸಮಯ ಬಂದಿದೆ. ಸೆಲೆಬ್ರಿಟಿ ಕ್ರಿಕೆಟ್‌ ಲೀಲ್‌ 11ನೇ ಸೀಸನ್‌ ಫೆ. 8ರಿಂದ ಆರಂಭವಾಗಲಿದ್ದು, ಕಾರ್ಯಕ್ರಮ ಉದ್ಘಾಟಿಸಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ಗೆ ಆಹ್ವಾನ ನೀಡಿದ್ದಾರೆ.
ಸುದೀಪ್‌ಗೆ ಡೈರೆಕ್ಟರ್ ಅನೂಪ್‌ ಭಂಡಾರಿ‌ ಸಾಥ್‌ ನೀಡಿದ್ದಾರೆ. ಫೆ.8ರಂದು ಸುದೀಪ್‌ ನಾಯಕತ್ವದ ಕರ್ನಾಟಕ ಬುಲ್ಡೋಜರ್ ತಂಡ ಹೈದರಾಬಾದ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ಈ ಬಾರಿ ಒಟ್ಟು 7 ತಂಡಗಳು ಪಾಲ್ಗೊಳ್ಳುತ್ತಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್ ಸೇರಿದಂತೆ 7 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!