ಕಳಸ : ಕಾಫಿನಾಡು ಚಿಕ್ಕಮಗಳೂರಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ಮಿತಿಮೀರಿದೆ. ಇಷ್ಟು ದಿನ ಕಾಡಾನೆ ದಾಳಿಯಿಂದ ಮಾನವ ಪ್ರಾಣಿ ಸಂಭವಿಸುತ್ತಿತ್ತು. ಇದೀಗ ಅದರ ಸಾಲಿಗೆ ಕಾಡುಕೋಣ ಎಂಟ್ರಿಕೊಟ್ಟಿದೆ.
ಕಾಡುಕೋಣ ದಾಳಿಗೆ ವೃದ್ಧರರೊಬ್ಬರು ಬಲಿಯಾಗಿರುವ ಘಟನೆ ಕಳಸ ತಾಲೂಕಿನ ಲಲಿತಾದ್ರಿ ಗ್ರಾಮದಲ್ಲಿ ನಡೆದಿದೆ. ರಘುಪತಿ(೭೩) ಮೃತ ವ್ಯಕ್ತಿ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ತೀವ್ರ ಸ್ವರೂಪದಲ್ಲಿ ಗಾಯಗೊಂಡ ರಘುಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂದು ಮಧ್ಯಾಹ್ನ ಕಾಫಿ ತೋಟದಲ್ಲಿ ಕೆಲಸ ಮಾಡಲು ರಘುಪತಿ ತೆರಳಿದ್ದರು. ಎಷ್ಟೇ ಫೋನ್ ಮಾಡಿದರೂ ರಿಸೀವ್ ಮಾಡದ ಕಾರಣ ತೋಟಕ್ಕೆ ಹೋಗಿ ನೋಡಿದಾಗ ಕಾಡುಕೋಣ ದಾಳಿಯಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ತೋಟಕ್ಕೆ ಮುಂಜಾಗ್ರತಾ ಕ್ರಮವಾಗಿ ಕಾಡು ಪ್ರಾಣಿಗಳು ಬರದಂತೆ ಆರು ಅಡಿ ಎತ್ತರದ ಬೇಲಿ ನಿರ್ಮಿಸಿದ್ದರೂ ಅದನ್ನು ದಾಟಿ ಬಂದು ಕಾಡುಕೋಣ ದಾಳಿ ನಡೆಸಿದೆ. ಕಳಸ ಭಾಗದಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿ ಹೋಗಿದ್ದು, ಎಷ್ಟೇ ಮನವಿ ಮಾಡಿದ್ರೂ, ಅರಣ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಡುಕೋಣ ದಾಳಿಗೆ ವೃದ್ಧ ಬಲಿ – ಕಾಫಿನಾಡಿನ ಜನರಿಗೆ ಶುರುವಾಯ್ತು ಹೊಸ ಟೆನ್ಶನ್..!
RELATED ARTICLES