ಹಾಸನ: ದಿಡೀರ್ ಎದೆನೋವು ಕಾಣಿಸಿಕೊಂಡು ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಕವನ(21) ಸಾ*ವನ್ನಪ್ಪಿರುವ ಘಟನೆ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಪಾಪಣ್ಣ-ಗಾಯತ್ರಿ ದಂಪತಿ ಮಗಳಾಗಿರುವ ಕವನ, ಹಾಸನದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದರು. ಈಗಾಗಲೇ ಮೂರು ಎಕ್ಸಾಂ ಬರೆದಿದ್ದ ಕವನ, ಇನ್ನೂ ಮೂರು ಪರೀಕ್ಷೆಯನ್ನ ಬೆಯಬೇಕಿತ್ತು. ನಾಳೆ ನಾಲ್ಕನೇ ವಿಷಯದ ಪರೀಕ್ಷೆಗೆ ಓದಿಕೊಳ್ಳುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದೆ. ಮಗಳನ್ನ ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಕಾಲೇಜಿನ ಸಹಪಾಠಿಗಳು-ಉಪನ್ಯಾಸಕರು ಸುದ್ದಿ ಕೇಳಿ ಕಣ್ಣೀರಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಹೃದಯಾಘಾತದಿಂದ 19 ವರ್ಷದ ಯುವಕ, ಯವತಿ ಪ್ರತ್ಯೇಕ ಪ್ರಕರಣದಲ್ಲಿ ಸಾ*ವನ್ನಪ್ಪಿದ್ರು. ಇದೀಗ ಮತ್ತೊಬ್ಬಳು ಯುವತಿ ಹೃದಯಾಘಾತದಿಂದ ಸಾ*ವನ್ನಪ್ಪಿರೋದು ಜನರನ್ನ ಆತಂಕಕ್ಕೆ ದೂಡಿದೆ

ಹೃದಯಾಘಾತದಿಂದ ಸಾವನ್ನಪ್ಪಿದ ಕವನ(21)