
ಅಹಮದ್ ಬಾದ್: ಮುಂಬೈ ಇಂಡಿಯನ್ಸ್ ಸೋಲಿಸಿ ಪಂಜಾಬ್ ಐಪಿಎಲ್ ಫೈನಲ್’ಗೆ ಅಧಿಕಾರಯುತವಾಗಿ ಲಗ್ಗೆಯಿಟ್ಟಿದೆ. ಭಾರೀ ಕುತೂಹಲ ಕೆರಳಿಸಿದ ಪಂದ್ಯದಲ್ಲಿ ಪಂಜಾಬ್, 5 ಭಾರೀ IPL ಕಿರೀಟ ಮುಡಿಗೇರಿಸಿಕೊಂಡಿದ್ದ ಮುಂಬೈಗೆ ಸೋಲಿನ ರುಚಿಯನ್ನ ತೋರಿಸಿದೆ. ಮಳೆಯಿಂದ ತಡವಾಗಿ ಆರಂಭವಾದ ಪಂದ್ಯದಲ್ಲಿ, ಪಂಜಾಬ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆಮಾಡಿಕೊಂಡು ಮುಂಬೈಯನ್ನ ಬ್ಯಾಟ್ ಮಾಡಲು ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ Bairstow 38, ತಿಲಕ್ ವರ್ಮಾ 44, ಸೂರ್ಯ ಕುಮಾರ್ ಯಾದವ್ 44, ನಮನ್ ಧೀರ್ 37 ರನ್ ಉತ್ತಮ ಆಟದಿಂದಾಗಿ ಒಟ್ಟು 6 ವಿಕೆಟ್ ಕಳೆದುಕೊಂಡು 203 ರನ್ ಗಳಿಸಿತು. ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್, ನಾಯಕ ಶ್ರೇಯಸ್ ಅಯ್ಯರ್(87) ಅಬ್ಬರದ ಬ್ಯಾಟಿಂಗ್ ನಿಂದಾಗಿ ಗೆಲುವಿನ ನಗೆ ಬೀರಿತು. ಈ ಮೂಲಕ ಜೂನ್ 3ರಂದು RCB ಎದುರಿಸಲು ಪಂಜಾಬ್ ಸಿದ್ದವಾಗಿದೆ.