ಬಿಗ್‌ಬಾಸ್ ಸೀಸನ್ 12ಕ್ಕೆ ಕೌಂಟ್‌ಡೌನ್ ಶುರುವಾಗ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಕನ್ನಡ ಬಿಗ್‌ಬಾಸ್ ಶುರುವಾಗಲಿದೆ. ಈ ಬಾರಿಯ ಬಿಗ್‌ಬಾಸ್‌ನ್ನು ಹೋಸ್ಟ್ ಮಾಡಲು ಕಿಚ್ಚ ಒಪ್ಪಿಕೊಂಡಿದ್ದಾರೆ. ಈ ಗುಡ್‌ನ್ಯೂಸ್ ಕೇಳಿ ಸುದೀಪ್ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ.
ತಿ ವೀಕೆಂಡ್ ಅಂತ ಬಂದಾಗ ಕಾಂಟ್ರವರ್ಸಿ ಮಾಡಿಕೊಂಡವರ ಪಂಚಾಯ್ತಿಗೆ ಸಮಯ ಹಾಕಬೇಕಾಗುತ್ತೆ. ಕೆಲವರು ಹೊರಗಡೆ, ಸ್ಟೇಜ್‌ಮೇಲೆ ಚನಾಗಿಯೇ ಇರ್ತಾರೆ ಆದ್ರೆ, ಒಳಗಡೆ ಹೋದ್ಮೇಲೆ ಕಾಂಟ್ರವರ್ಸಿ ಶುರು ಮಾಡುತ್ತಾರೆ. ಹಾಗೆ ಯಾರನ್ನೂ ಜಡ್ಜ್ ಮಾಡೋಕೆ ಆಗೋಲ್ಲ. ಆದ್ರೆ ಕೆಲವು ಷರತ್ತುಗಳಿವೆ ಅದು ಏನು ಅಂತಾ ಈಗ ಹೇಳಲ್ಲ ಎಂದಿದ್ದಾರೆ ಕಿಚ್ಚ
ಬಿಗ್‌ಬಾಸ್ ಶೋ ಜೊತೆಗೆ ವರ್ಷಕ್ಕೆರಡು ಸಿನಿಮಾ ಮಾಡುವ ಡೆಡಿಕೇಶನ್ ಬಗ್ಗೆ ಅಭಿಪ್ರಾಯವನ್ನ ರಿಯಾಲಿಟಿ ಶೋ ಆಯೋಜಕರು ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ಸೀಸನ್ 12ರ ನಿರೂಪಣೆ ಮಾಡಲು ಕಿಚ್ಚ ಸುದೀಪ್ ಒಪ್ಪಿಕೊಂಡಿರುವುದು, ಸುದೀಪ್ ಅಭಿಮಾನಿಗಳಿಗೆ ಡಬಲ್ ಹ್ಯಾಪಿ ನೀಡಿದೆ