ವಿಜಯಪುರ: ಜವಾಹರಲಾಲ್ ನೆಹರೂ ಅವರಿಂದಲೇ ಆರ್‌ಎಸ್‌ಎಸ್ ನಿಷೇಧ ಮಾಡೋಕೆ ಆಗಲಿಲ್ಲ. ಇನ್ನು ಇವರ ಕೈಯಿಂದ ಸಾಧ್ಯನಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದರು.

ಖರ್ಗೆ ಕುಟುಂಬ ಯಾವ ದಲಿತರನ್ನ ಉದ್ದಾರ ಮಾಡಿದ್ದಾರೆ ಇವರು ಅಂಬೇಡ್ಕರ್ ಅನುಯಾಯಿ ಅಲ್ಲ. ಸೋನಿಯಾ ಗಾಂಧಿ ಅನುಯಾಯಿ ಎಂದು ವಾಗ್ದಾಳಿ ನಡೆಸಿದರು.
ಹಾಗೆ ಟಿಕೆಟ್ ವಂಚಿತರ ಪರವಾಗಿ ಸಭೆಯಲ್ಲಿ ವಾದ ಮಾಡಿದ್ದೆ. ಅದೇ ರೀತಿ ಈಗಲೂ ಮೊದಲು ನಮ್ಮ ತಂಡದವರು ಒಳಗೆ ಕಾಲಿಡಲಿ. ಆ ಬಳಿಕ ಅವರೇ ನನ್ನನ್ನು ವಾಪಸ್ ಕರೆಸುವ ಬಗ್ಗೆ ಸಭೆಯಲ್ಲಿ ಮಾತಾಡ್ತಾರೆ. ನಮ್ಮ ತಂಡದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.