ಹಾಸನ: ಹಾಸನ, ಶಿವಮೊಗ್ಗದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಮತ್ತೆ ಜಿಲ್ಲೆಯ ಶೆಟ್ಟಿಹಳ್ಳಿ ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ

ಶೆಟ್ಟಿಹಳ್ಳಿ ಸಮೀಪದ ಮುಟ್ಟನಹಳ್ಳಿ ಗ್ರಾಮದ ಸಣ್ಣಪ್ಪ ಶೆಟ್ಟಿ(50 )ಮೃತ ವ್ಯಕ್ತಿಯಾಗಿದ್ದಾರೆ. ಬೆಳಗ್ಗೆ ಪರಿಚಯಸ್ಥರ ಒಬ್ಬರ ಸಾವಿಗೆ ಹೋಗಿ ಮನೆಗೆ ಬಂದು ನಂತರ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯ ಮನೆಗೆ ಸಿಮೆಂಟ್ ಮಂಜು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು ಹಾಗೆ ಹೃದಯಾಘಾತ ತಪ್ಪಿಸಲು ಎಲ್ಲರೂ ಪರೀಕ್ಷೆ ಮಾಡಿಕೊಳ್ಳುವಂತೆ ಶಾಸಕರು ಸ್ಥಳಿಯರಿಗೆ ಸಲಹೆ ನೀಡಿದರು.
ಸದ್ಯ ಹಾಸನ ಜಿಲ್ಲೆಯಲ್ಲಿ ಕಳೆದ 42 ದಿನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.ಮೃತಪಟ್ಟವರು ವಯಸ್ಸಾದವರಷ್ಟೇ ಅಲ್ಲ, ಸಣ್ಣ ವಯಸ್ಸಿನವರೂ ಸೇರಿ ಎಲ್ಲಾ ವಯೋಮಾನದವರೂ ಇದ್ದಾರೆ.