ಹಾಸನ: ಜಿಲ್ಲೆಯಲ್ಲಿ ಸರಣಿ ಹೃದಯಾಘಾತ ಮುಂದುವರೆದಿದ್ದು ಇದೀಗ ಗ್ರಾಮ ಪಂಚಾಯತ್ ಸದಸ್ಯ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಕಾರಗೋಡು ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಸಂತೋಷ್ (41) ಹೃದಯಾಘಾತದಿಂದ ಮೃತಪಟ್ಟಿದ್ದು ಆಲೂರು ತಾಲೂಕಿನ ಕಲ್ಲಾರೆ ಗ್ರಾಮದಲ್ಲಿ ನಡೆದ ದುರ್ಘಟನೆಯಾಗಿದೆ.
ರಾತ್ರಿ ಮಲಗಿದ್ದಲ್ಲಿಯೇ ಸಂತೋಷ್‌ಗೆ ಹೃದಯಾಘಾತವಾಗಿದ್ದು ಬೆಳಗ್ಗೆ ಮೇಲೆಳದಿದ್ದಾಗ ನೋಡಿದ ಕುಟುಂಬಸ್ಥರು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು ಅಷ್ಟರಲ್ಲೇ ಹೃದಯಾಘಾತದಿಂದ ಸಂತೋಷ್ ಸಾವನ್ನಪ್ಪಿದ್ದಾಗಿತ್ತು.
ಹಾಸನ ಜಿಲ್ಲೆಯಲ್ಲಿ ಒಂದುವರೆ ತಿಂಗಳಿನಲ್ಲಿ ಹೃದಯಾಘಾತಕ್ಕೆ 30 ಮಂದಿ ಸಾವನ್ನಪ್ಪಿದ್ದು ಈಗ ಇಲ್ಲಿನ ಜನರಿಗೆ ಭಾರೀ ಆಘಾತವುಂಟು ಮಾಡಿದ್ದು ಎಲ್ಲರು ಭಯದಲ್ಲಿ ಬದುಕುವ ಸ್ಥಿತಿ ಎದುರಾದಂತೆ ಕಾಣುತ್ತಿದೆ.