ಹಾಸನ: ಜಿಲ್ಲೆಯಲ್ಲಿ ಹೃದಯಾಘಾತ ಹಾಗೂ ಕಾರ್ಡಿಯಾಕ್ ಅರೆಸ್ಟ್‌ನಿಂದ ಆಗುವ ಸಾವುಗಳಿಗೆ ಕೊನೆಯೇ ಸಿಗುತ್ತಿಲ್ಲ . ಸಂಪೂರ್ಣ ಆರೋಗ್ಯವಾಗಿದ್ದವರೂ ಸಹ ದಿಢೀರನೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಹೌದು … ಜೂನ್ 13 ರಂದು ಕಾರಿನಲ್ಲಿ ಬಲಿಯಾಗಿದ್ದ ಚನ್ನರಾಯಪಟ್ಟಣದ ಗ್ರಾಮ ಲೆಕ್ಕಿಗ ದೇವರಾಜ್(43) ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕರಾಳ ಸತ್ಯ ಬಯಲಾಗಿದೆ.
ಆರೋಗ್ಯ ಚೆಕ್ ಮಾಡಿಸಿಕೊಂಡಿದ್ದಾಗ ಸಂಪೂರ್ಣ ಸುರಕ್ಷಿತವಾಗಿದ್ದ ದೇವರಾಜ್ ಹಠಾತ್ ಸಾವನ್ನಪ್ಪಿದ್ದು, ಎಲ್ಲರಿಗೂ ಅಚ್ಚರಿಯಾಗಿತ್ತು. ಅದೇನಾಯ್ತೋ ಏನೋ ಅಂತ ಎಲ್ಲರೂ ಗಾಬರಿಯಾಗಿದ್ದರು. ಇದೀಗ ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಹೃದಯ ಸ್ತಂಭನ. ಸಹಜ ಸಾವು ಎಂದು ವರದಿಯಿಂದ ತಿಳಿದುಬಂದಿದೆ.
ಬೆಳಗ್ಗೆ ವಾಕ್, ಮನೆಯಲ್ಲೇ ಊಟ ಮಾಡುತ್ತಿದ್ದ ದೇವರಾಜ್, ಜಂಕ್ ಫುಡ್ ನಿಂದ ದೂರವಿದ್ದರು. ಆದರೂ ಸಹ ಜಮೀನಿಗೆ ಹೋಗಿ ಬರುವುದಾಗಿ ಹೋಗಿದ್ದ ದೇವರಾಜ್ ವಾಪಸ್ ಮನೆ ಬಂದಿದ್ದು ಮಾತ್ರ ಹೆಣವಾಗಿ
ಅಸಮತೊಲನದ ಅಹಾರ ಸೇವನೆ ಹಾಗೂ ಜೀವನ ಶೈಲಿಯಿಂದಲೇ ಹಾರ್ಟ್ ಅಟ್ಯಾಕ್ ಹೆಚ್ಚುತ್ತಿದೆ ಎಂದು ಹಾಸನ ಡಿಎಚ್‌ಓ ಡಾ.ಅನಿಲ್ ತಿಳಿಸಿದ್ದಾರೆ. ಕಳೆದ 2 ವರ್ಷಗಳಲ್ಲಿ 507 ಮಂದಿಗೆ ಹೃದಯಾಘಾತವಾಗಿದ್ದು, 20 ರಿಂದ 30 ವರ್ಷದ 14 ಮಂದಿ, 30 ರಿಂದ 40 ವರ್ಷದ 40 ಮಂದಿ, 40 ವರ್ಷ ಮೇಲ್ಪಟ್ಟವರ ಪೈಕಿ 136 ಮಂದಿಗೆ ಹೃದಯಾಘಾತವಾಗಿದೆ. ಈ ಅವಧಿಯಲ್ಲಿ 140 ಮಂದಿ ಸಾವು ಕಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.