ಚಿಕ್ಕಮಗಳೂರು: ಕೊಪ್ಪದ ಮೊರಾರ್ಜಿ ಶಾಲೆಯ 14 ವರ್ಷದ 9 ನೇ ತರಗತಿ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು . ಈ ಬಗ್ಗೆ ನಿರಂತರವಾಗಿ ಪಬ್ಲಿಕ್ ಇಂಪ್ಯಾಕ್ಟ್ ಪ್ರಸಾರ ಮಾಡಿದ್ದು ಅತ್ತ ಸ್ಥಳೀಯ ಶಾಸಕರು ಕೂಡ ಈ ಶಾಲೆಯ ಹತ್ತಿರ ಸುಳಿದೆ ಇಲ್ಲ. ಇದೊಂದು ಕೊಲೆನಾ? ಆತ್ಮಹತ್ಯೆಯೋ? ಎಂದು ಯಾವುದೇ ಮಾಹಿತಿ ಕಂಡು ಬಂದಿಲ್ಲ. ಮುರಾರ್ಜಿ ಶಾಲೆಯ ವ್ಯವಸ್ಥೆ ಬಗ್ಗೆ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
⏭ ನಿಗೂಢ ಸಾವಿಗೆ ಹೆದರಿ ಹಾಸ್ಟೆಲ್ ಖಾಲಿ ಮಾಡಿದ 190 ಮಕ್ಕಳು
⏭ ಶಮಿತಾ ಸಾವು ಆತ್ಮಹತ್ಯೆನಾ.? ಕೊಲೆನಾ.?
⏭ ಶಾಲೆ ಕಡೆ ಮುಖ ಹಾಕಲಿಲ್ಲ, ಪೋಷಕರಿಗೂ ಸಾಂತ್ವನ ಹೇಳಲಿಲ್ಲ ಶಾಸಕ
⏭ ಬಡ ಮಕ್ಕಳ ಜೀವಕ್ಕಿಂತ ರಾಜಕೀಯನೇ ಹೆಚ್ಚಾಯ್ತಾ ರಾಜೇಗೌಡ್ರೇ.?
ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಪಂ ವ್ಯಾಪ್ತಿಯ ಬೊಮ್ಮಲಾಪುರ ಸಮೀಪದ ಹೊಕ್ಕಳಿಕೆಯಲ್ಲಿ ವಾಸವಿರುವ ಸಂದೇಶ್ ಶೆಟ್ಟಿ ಮತ್ತು ಸಂಗೀತ ಶೆಟ್ಟಿ ದಂಪತಿ ಪುತ್ರಿ ಶಮಿತಾ ಎಸ್. ಶೆಟ್ಟಿ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಸೂಕ್ತ ತನಿಖೆಯ ಅಗತ್ಯವಿದ್ದು, ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಶಮಿತಾ ಎಸ್. ಶೆಟ್ಟಿ (14) ಎಲ್ಲರೂ ಮಲಗಿದ್ದ ವೇಳೆ ಬಾತ್ ರೂಮಿಗೆ ತೆರಳಿ ತನ್ನ ಚೂಡಿದಾರ್ ವೇಲ್‌ನಲ್ಲಿ ನೇಣು ಬಿಗಿದು ಕೊಂಡಿದ್ದಾಳೆ. ಬೆಳಗಿನ ಜಾವ 3 ಗಂಟೆ ವೇಳೆಯಲ್ಲಿ ಬೇರೆ ವಿದ್ಯಾರ್ಥಿನಿಯರು ಬಾತ್‌ರೂಮಿಗೆ ಹೋದ ವೇಳೆ ಶಮಿತಾ ನೇಣು ಬಿಗಿದುಕೊಂಡಿರುವ ವಿಚಾರ ಹಾಸ್ಟೆಲ್ ಮೇಲ್ವಿಚಾರಕರಿಗೆ ತಿಳಿಸಿದ್ದಾರೆ. ಶಿಕ್ಷಕರು ಮತ್ತು ಸಿಬ್ಬಂದಿ ಬಂದು ನೋಡುವ ಸಮಯದಲ್ಲಿ ಹುಡುಗಿ ಪ್ರಾಣ ಹೋಗಿತ್ತು. ಶಮಿತ 6ನೇ ತರಗತಿಯಿಂದಲೂ ಇದೇ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು
ಕಳೆದ 2 ವರ್ಷಗಳ ಹಿಂದೆ ನಾರ್ವೆ ಮೂಲದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇದೆ ಬಾತ್‌ರೂಮಿನಲ್ಲಿ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಳು.ಶಮಿತಾ ಸಾವಿನಲ್ಲಿಯೂ ಇದೇ ರೀತಿ ಸಾಮ್ಯತೆ ಕಂಡುಬಂದಿದ್ದು ಶೌಚಾಲಯವನ್ನು ಕೂಡಲೇ ಮುಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದು ಶಮಿತಾ ಸಾವಿನ ಬಗ್ಗೆ ಮತ್ತು ಮೊರಾರ್ಜಿ ವಸತಿ ಶಾಲೆ ವ್ಯವಸ್ಥೆ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕೆಂದು ಶಮಿತಾ ಪೋಷಕರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ನಿಗೂಢ ಸಾವಿಗೆ ಹೆದರಿ ಹಾಸ್ಟಲ್ ನಲ್ಲಿದ್ದ 190 ಮಕ್ಕಳು ಕೂಡ ಹಾಸ್ಟಲ್ ಬಿಟ್ಟು ಮನೆಗೆ ವಾಪಸ್ ಬಂದಿದ್ದಾರೆ. ಅಲ್ಲಿನ ಶಾಸಕ ರಾಜೇಗೌಡ ಇದರ ಬಗ್ಗೆ ಯಾವುದೇ ಮಾಹಿತಿಯನ್ನ ಉ ಪಡೆಯದೇ ಇಲ್ಲಿಯವರೆಗೂ ಆ ಶಾಲೆಯ ಹತ್ತಿರ ಮುಖ ಕೂಡ ಹಾಕದೆ ಇದ್ದಿದ್ದು ವಿಪರ್ಯಾಸವೇ ಆಗಿದೆ. ಇವರಿಗೆ ಬಡವರ ಮಕ್ಕಳ ಬಗ್ಗೆ ಅರಿವಿಲ್ಲವೇ , ಬಡ ಮಕ್ಕಳಿಗಿಂತ ರಾಜಕೀಯನೇ ಹೆಚ್ಚಾಯ್ತಾ ಶಮಿತಾ ಸಾವು ಕೊಲೆನಾ? ಆತ್ಮಹತ್ಯೆಯೋ ಎಂದು ತಿಳಿಯದಷ್ಟು ಬೇಡವಾಗಿದೆಯೇ ಹಾಗೆ ಮುರಾರ್ಜಿ ಶಾಲೆಯ ವ್ಯವಸ್ಥೆ ಬಗ್ಗೆ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಶಾಸಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.