ಮೂಡಿಗೆರೆ: ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಅಲ್ಲಿನ ಜನರಿಗೆ ದಿನಾ ಓಡಾಟ ನಡೆಸಲೆ ತುಂಬಾ ಕಷ್ಟಕರವಾಗುತ್ತಿದ್ದರು ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ ಇದರ ನಡುವೆ ತಮ್ಮ ದಿನ ನಿತ್ಯದ ಕಾರ್ಯ ಕೆಲಸ ಮಾಡಲು ಹೊರಗಡೆ ತೆರಳಬೇಕಾಗುತ್ತದೆ.
ಹಾಗೆ ಮೂಡಿಗೆರೆ ತಾಲೂಕಿನ ಅಬ್ಬುಗೂಡಿಗೆ ಗ್ರಾಮದ ಬಳಿ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಸುಮಾರು 10 ಅಡಿ ಆಳದ ಕಾಫಿತೋಟಕ್ಕೆ ಬಿದ್ದಿದೆ.
ಅದೃಷ್ಟವಶಾತ್ ತೋಟದ ಬೇಲಿಗೆ ಹಾಕಿದ್ದ ವಿದ್ಯುತ್ ತಂತಿ ಕಾರಿಗೆ ಸಿಲುಕಿಕೊಂಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.