Advertisement

Homeಇತರೆಬಣಕಲ್‌ಗೆ ಬಸ್ ತಂಗುದಾಣ ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ: ಪ್ರಯಾಣಿಕರ ನಿರಾಶ್ರಿತ ಸ್ಥಿತಿ ಅಂತ್ಯ

ಬಣಕಲ್‌ಗೆ ಬಸ್ ತಂಗುದಾಣ ಉದ್ಘಾಟಿಸಿದ ಶಾಸಕಿ ನಯನಾ ಮೋಟಮ್ಮ: ಪ್ರಯಾಣಿಕರ ನಿರಾಶ್ರಿತ ಸ್ಥಿತಿ ಅಂತ್ಯ

ಕೊಟ್ಟಿಗೆಹಾರ: ಬಣಕಲ್ ಗ್ರಾಮಸ್ಥರು ಬಹು ದಿನಗಳಿಂದ ಕಾಯುತ್ತಿದ್ದ ಬಸ್‌ ತಂಗುದಾಣಕ್ಕೆ ಇಂದು ಮುಕ್ತಿ ಸಿಕ್ಕಿದ್ದು ಕೊನೆಗೂ ಚಾಲನೆ ದೊರೆತಿದೆ.

ಯೆಸ್‌… ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಇಂದು ಬಸ್‌ ತಂಗುದಾಣವನ್ನು ಉದ್ಘಾಟನೆ ಮಾಡಿದ್ದು ಅಲ್ಲಿನ ಗ್ರಾಮಸ್ಥರಿಗೆ ಒಂದು ರೀತಿ ದಶಕಗಳಿಂದ ರಸ್ತೆಬದಿಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಕೆಲಸಗಾರರು ಹಾಗೂ ಪ್ರಯಾಣಿಕರಿಗೆ ನಿರಾಶ್ರಿತ ಸ್ಥಿತಿಗೆ ಅಂತ್ಯ ಸಿಕ್ಕಿದ್ದು ಹಾಗೆ ಮಳೆಗಾಲದಲ್ಲಿ ಗಾಳಿ ಮತ್ತು ಮಳೆಯಿಂದ ರಕ್ಷಣೆಗಾಗಿ ಅಂಗಡಿಗಳ ಆಶ್ರಯ ಬೇಕಾಗುತ್ತಿದ್ದ ಸಂದರ್ಭಗಳಿಗೂ ಇಂದು ತೆರೆ ಕಂಡಿದೆ ಅಂದರೂ ತಪ್ಪಾಗಲಾರದು.

ಆ ನಂತರ ಶಾಸಕಿ ನಯನ ಮೋಟಮ್ಮ ಅಲ್ಲಿನ ಸ್ಥಳಿಯರನ್ನು ಉದ್ದೇಶಿಸಿ ಮಾತನಾಡಿ, ಗ್ರಾಮದ ಜನತೆ ಹಲವು ವರ್ಷಗಳಿಂದ ತಂಗುದಾಣದ ಅಗತ್ಯವನ್ನು ಮುಂದಿಟ್ಟು ಬಂದಿದ್ದರು. ಈ ಸಂದರ್ಭದಲ್ಲಿ ತಂಗುದಾಣ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಝರಿನ್, ಉಪಾಧ್ಯಕ್ಷೆ ಬಿ.ಬಿ. ಲೀಲಾವತಿ, ಪಿಡಿಓ ಕೃಷ್ಣಪ್ಪ, ಪಂಚಾಯಿತಿ ಸದಸ್ಯರಾದ.ಅತೀಕ ಬಾನು, ಇರ್ಫಾನ್, ಸಿರಾಜ್,ವಿನಯ್, ಮದುಕುಮಾರ್, ಸ್ಥಳೀಯರಾದ ದಿಲ್ದಾರ್ ಬೇಗಂ, ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಸುಬ್ರಮಣ್ಯ, ಕುಂಜಿಮೋಣು, ಪೋಲ್ಸನ್, ಶಿವರಾಮ್ ಶೆಟ್ಟಿ, ಅಜೀದ್, ಸಿದ್ದೀಕ್,ಗೋಪಾಲ ಚಾರ್, ವಿಕ್ರಂ ಗೌಡ, ಸತೀಶ್ ಗೌಡ, ಮೆಲ್ವಿನ್,ಉಮ್ಮಾರ್, ಹೊಸಕೆರೆ ರಮೇಶ್,ಸಬ್ಲಿ ದೇವರಾಜ್,ದೇವಪ್ಪ ಜನಪ್ರತಿನಿಧಿಗಳು,ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!