ಮೂಡಿಗೆರೆ: ಮಲೆನಾಡಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಪಟ್ಟಣದದಲ್ಲಿರುವ ಕುರುಕುಮಕ್ಕಿ ಚೌಡೇಶ್ವರಿ ದೇವಸ್ಥಾನದ ಸುತ್ತಾಮುತ್ತ 100 ಅಡಿ ಭೂ ಕುಸಿತ ಉಂಟಾಗಿದೆ

ಚೌಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಡಿಕೆ ಉದಯ್ ಶಂಕರ್ ಹಾಗೆ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಭೂಕುಸಿತದಿಂದ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ಸನ್ನಿಧಿಗೆ ಹಾನಿ ಉಂಟಾಗುವ ಸಂಭವಿದೆ ಎಂದು ಅಲ್ಲಿನ ಭಕ್ತರಿಗೆ ಆತಂಕ ಉಂಟಾಗಿದೆ
ಈ ಕೂಡಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡು ಮಳೆಯಿಂದಾಗಿ ಮುಂದೆ ಆಗುವ ಅನಾಹುತವನ್ನು ತಡೆಯಬೇಕಾಗಿ ಭಕ್ತಾದಿಗಳು ವಿನಂತಿ ಮಾಡಿಕೊಂಡಿದ್ದಾರೆ