ಕೊಪ್ಪ: ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆ ಭಾರೀ ಚರ್ಚೆಯಲ್ಲಿದೆ. ಇದರ ಬಗ್ಗೆ ಶಮಿತಾ ಅಕ್ಕ ವಿನುಷಾ ಮಾತನಾಡಿದ್ದು ನನ್ನ ತಂಗಿ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನ ಕೊಲೆ ಮಾಡಿದ್ದಾರೆ ಎಂದು ಸಹೋದರಿ ನೆನೆದು ಪಬ್ಲಿಕ್ ಇಂಪ್ಯಾಕ್ಟ್ ಬಳಿ ಕಣ್ಣೀರು ಹಾಕಿದಳು.
ಹೌದು .. ಕೊಪ್ಪದ ಮೊರರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಶಮಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಲ್ಲಿನ ಆಡಳಿತ ಮಂಡಳಿ ಹೇಳುತ್ತಿದ್ದರು ಆದರೆ ಪೋಷಕರು ಮಾತ್ರ ಇದೊಂದು ಕೊಲೆಯೆಂದು ಆರೋಪಿಸುತ್ತಿದ್ದಾರೆ.
ಈ ವೇಳೆ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಶಮಿತಾ ಅಕ್ಕ ವಿನುಷಾ ಮಾತನಾಡಿ, ಅವಳ ಪ್ರತಿಯೊಂದು ವಿಚಾರವನ್ನ ನನ್ನ ಜೊತೆ ಹೇಳ್ತಾ ಇದ್ದಳು ಏನಾದ್ರೂ ಸಮಸ್ಯೆ ಇದ್ರೆ ಖಂಡಿತ ನನ್ ಜೊತೆ ಹೇಳ್ತಿದ್ಳು ನನ್ ತಂಗಿ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವಳನ್ನ ಕೊಲೆ ಮಾಡಿದ್ದಾರೆ, ನ್ಯಾಯ ಕೊಡ್ಸಿ ಪ್ಲೀಸ್ ಮಾಧ್ಯಮದೆದುರು ಗಳಗಳನೆ ಕಣ್ಣೀರಿಟ್ಟಳು.