ಕೊಪ್ಪ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಿನ್ಸಿಪಾಲರನ್ನ ಶಾಸಕರು ರಕ್ಷಣೆ ಮಾಡುತ್ತಿದ್ದಾರೆ ಎಂದು ಶಮಿತಾ ತಂದೆ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪದ ಮೊರರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದ ಶಮಿತಾ ನಿಗೂಢವಾಗಿ ಸಾವನ್ನಪ್ಪಿದ್ದಳು ಆದರೆ ಶಾಲೆಯ ಆಡಳಿತ ಮಂಡಳಿ ಮಾತ್ರ ಆತ್ಮಹತ್ಯೆ ಎಂದು ಹೇಳುತ್ತಿದ್ದರು ಆದರೆ ಪೋಷಕರು ಮಾತ್ರ ಇದೊಂದು ಕೊಲೆಯೆಂದು ಆರೋಪ ಮಾಡುತ್ತಾ ಬಂದಿದ್ದು ಹೀಗಾಗಿ ಅಲ್ಲಿನ ಸ್ಥಳೀಯ ಶಾಸಕರಾದ ಟಿ.ಡಿ.ರಾಜೇಗೌಡ ಅವರು ಭೇಟಿ ನೀಡಿ ನ್ಯಾಯ ಒದಗಿಸುವ ಭರವಸೆ ನೀಡಿದ್ರು.
ಆದರೆ ಇಂದು ಮೃತ ಶಮಿತಾ ತಂದೆ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿ, ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ, ನಿನ್ನೆಯೇ ಎಲ್ಲರನ್ನೂ ಸಸ್ಪೆಂಡ್ ಮಾಡ್ತೀವಿ ಅಂದಿದ್ರು ಆದರೆ ಶಾಲೆಯ ಪ್ರಿನ್ಸಿಪಾಲರನ್ನ ರಕ್ಷಣೆ ಮಾಡುವ ಹಾಗೆ ಕಾಣ್ತಿದೆ ಹಾಗೂ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲವೆಂದು ಶಾಸಕ ಟಿ.ಡಿ ರಾಜೇಗೌಡ ವಿರುದ್ಧವೇ ಶಮಿತಾ ತಂದೆ ಸಂದೇಶ್ ಅಸಮಾಧಾನ ಹೊರಹಾಕಿದರು.
ಕೊಪ್ಪ ಮೊರಾರ್ಜಿ ವಸತಿ ಶಾಲೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರ ಬಗ್ಗೆ ನಿರಂತರವಾಗಿ ಪಬ್ಲಿಕ್ ಇಂಪ್ಯಾಕ್ಟ್ ವರದಿ ಮಾಡುತ್ತಲೇ ಬಂದಿದ್ದು ಇನ್ನಾದರೂ ಶಾಸಕರು ಶಾಲೆಯ ಪ್ರಿನ್ಸಿಪಾಲರನ್ನು ಸಸ್ಪೆಂಡ್ ಮಾಡಲು ಆದೇಶ ನೀಡಿ ಪೋಷಕರ ಕುಟುಂಬಕ್ಕೆ ನೆರವಾಗುತ್ತಾರೋ ಕಾದು ನೋಡಬೇಕಿದೆ.