Sunday, March 29, 2026
Homeಜಿಲ್ಲಾಸುದ್ದಿಕಾನೂನು ಉಲ್ಲಂಘಿಸುವ ರೆಸಾರ್ಟ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಕೈ ಮುಖಂಡ ಭರತ್‌ ನೇತೃತ್ವದಲ್ಲಿ ಮನವಿ!

ಕಾನೂನು ಉಲ್ಲಂಘಿಸುವ ರೆಸಾರ್ಟ್‌ ಮಾಲೀಕರ ವಿರುದ್ಧ ಕ್ರಮಕ್ಕೆ ಕೈ ಮುಖಂಡ ಭರತ್‌ ನೇತೃತ್ವದಲ್ಲಿ ಮನವಿ!

ಚಿಕ್ಕಮಗಳೂರು: ಕಾನೂನು ಉಲ್ಲಂಘನೆ ಮಾಡಿರುವ ರೆಸಾರ್ಟ್ ಮಾಲೀಕರ ಮೇಲೆ ಕ್ರಮ ಜರುಗಿಸುವ ಬಗ್ಗೆ ಕಾಂಗ್ರೆಸ್‌ ಮುಖಂಡ ಉಪ್ಪಳ್ಳಿ ಕೆ.ಭರತ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಕರ್ಕನಹಳ್ಳಿ ಗ್ರಾಮದಲ್ಲಿರುವ ಬಿಂಡಿಗ ಪೀಕ್ ರಿಸಲ್ಟ್ ನಲ್ಲಿ ದಿನಾಂಕ 4 /5 /202ರ ಭಾನುವಾರದಂದು ಚಿಕ್ಕಮಗಳೂರು ನಗರದ ಭಾರತ್ ಕಾಫಿ ಅಲ್ಲಿಂಗ್ ತೆಗೂರು ಮಾಲೀಕರಾದಂತ ಮುಕ್ತಾಕ್‌ ಅವರು ತಮ್ಮ ಮಗಳ ಮದುವೆ ಕಾರ್ಯಕ್ರಮವನ್ನು ಸಂಜೆ ಈ ರೆಸಾರ್ಟ್‌ ನಲ್ಲಿ ನಿಗದಿಪಡಿಸಿರುತ್ತಾರೆ. ಈ ಕಾರ್ಯಕ್ರಮಕ್ಕೆ ನೂರಾರು ಜನರನ್ನು ಆಹ್ವಾನಿಸಿದ್ದು ಆದರೆ ರೆಸಾರ್ಟ್‌ ನಲ್ಲಿ ಸುಮಾರು 25 ರಿಂದ 30 ವಾಹನಗಳಿಗಷ್ಟೇ ವಾಹನ ನಿಲುಗಡೆಗೆ ಅವಕಾಶ ಇರುವುದು ಕಂಡುಬಂದಿರುತ್ತದೆ.

ಈ ರೆಸಾರ್ಟ್‌ ಗೆ ಹೋಗಲು ಮುಖ್ಯ ರಸ್ತೆಯಿಂದ 2.5 ಕಿಲೋಮೀಟರ್ ಉದ್ದದ ಕಿರಿದಾದ ಹಾಗೂ ಸುಮಾರು ಎಂಟು ಅಡಿ ಅಗಲದ ರಸ್ತೆ ಇದ್ದು ರಸ್ತೆಯ ಇಕ್ಕೆಲಗಳಲ್ಲಿ ಮಳೆಯ ನೀರು ಅಥವಾ ಇನ್ನಿತರ ನೀರು ಹರಿದು ಹೋಗಲು ಚರಂಡಿ ಕೂಡ ಇರುವುದಿಲ್ಲ ಹಾಗೂ ಈ ರಸ್ತೆಯಲ್ಲಿ ವಾಹನವಷ್ಟೇ ಸಂಚರಿಸಲು ಸಾಧ್ಯವಾಗುತ್ತದೆ ಇಷ್ಟು ಸಮಸ್ಯೆಗಳಿದ್ದರೂ ಕೂಡ ಇಷ್ಟು ದೊಡ್ಡ ಕಾರ್ಯಕ್ರಮವನ್ನು ನಡೆಸಿಕೊಡುತ್ತೇವೆ ಎಂದು ರೆಸಾರ್ಟ್‌ ಮಾಲೀಕರು ಲಕ್ಷಾಂತರ ಹಣವನ್ನು ತೆಗೆದುಕೊಂಡುರುತ್ತಾರೆ. ಸುಮಾರು 650ಕ್ಕೂ ಹೆಚ್ಚು ನಾಲ್ಕು ಚಕ್ರದ ವಾಹನಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು ಸುಮಾರು 1,500 ರಿಂದ 3750 ಸಂಖ್ಯೆಯಷ್ಟು ಜನಗಳು ರೆಸಾರ್ಟ್ ನಲ್ಲಿ ಕಾರ್ಯಕ್ರಮಕ್ಕೆ ಜಮಾವಣೆಗೊಂಡಿದ್ದರು ಅಂದು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಹೋಗುವಾಗ ವಾಹನ ಸವಾರರು ತಮ್ಮ ವಾಹನಗಳನ್ನು ತೆಗೆಯಲು ಪರದಾಡುವ ಸ್ಥಿತಿ ಉಂಟಾಯಿತು.

ಹಾಗೆ ಈ ಗ್ರಾಮದ ಸ್ಥಳೀಯ ನಿವಾಸಿಗಳು ಮತ್ತು ಸುತ್ತಮುತ್ತಲಿನ ಸವಾರರು, ಜನಸಾನ್ಯರು ತಮ್ಮ ಮನೆಗಳಿಗೆ ಹಾಗೂ ತೋಟಗಳಿಗೆ ಹೋಗಲು ಆಗದೆ ತೊಂದರೆಗೊಳಪಟ್ಟು ಪರದಾಡುವಂತಾಗಿದೆ ಹಾಗೂ ಅಂದು ಆಕಾರ್ಯಕ್ರಮಕ್ಕೆ ಭಾಗಿಯಾದರು ತಮ್ಮ ಮನೆಗೆ ಹೋಗಲು ಬೆಳಗಿನ ಜಾವ ಕೂಡ ಆಗಿದೆ ಎಂದರು.

ಆದಕಾರಣ ಕೂಡಲೇ ಈ ರೆಸಾರ್ಟ್‌ ಗೆ ಅನ್ವಯಿಸುವಂತೆ ಕಾನೂನುಗಳನ್ನು ಮೀರಿ ನಡೆದುಕೊಂಡಿದ್ದಾರೆ ಹಾಗೆ ಈ ರೆಸಾರ್ಟ್‌ ಪರವಾನಿಯನ್ನು ಕೂಡ ರದ್ದುಪಡಿಸಬೇಕು. ಈಗಾಗಲೇ ಈ ಗ್ರಾಮದ ನಿವಾಸಿಗಳಿಂದ ಹಾಗೂ ಇತರರಿಂದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿವೆ ಹಾಗೂ ಜಿಲ್ಲಾಧಿಕಾರಿಗೆ ಮೇಲೆ ಹೇಳಿರುವ ಹಾಗೂ ಇನ್ನಿತರ ವಿಷಯಗಳ ಕುರಿತು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ರೂ ಕ್ರಮ ಕೈಗೊಂಡಿಲ್ಲ ಹಾಗಾಗಾಗಿ ಇನ್ನ 8 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ರೆ ಗ್ರಾಮಸ್ಥರು ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!