ಚಿಕ್ಕಮಗಳೂರು : ಜಿಲ್ಲೆಗೆ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ಗೆ ಪ್ರವೇಶ ನಿರ್ಬಂಧವನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ರಂಗನಾಥ್ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲಾಡಳಿತ ಶರಣ್ ಪಂಪ್ ವೆಲ್ ಅವರ ಮೇಲೆ ನಿಷೇಧ ಹೇರಿರುವ ಬಗ್ಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರಿಗೆ ಚಿಕ್ಕಮಗಳೂರು ಜಿಲ್ಲೆಗೆ ಬಾರದಂತ ನಿರ್ಬಂಧ ಏರಿ ಸಂವಿಧಾನ ವಾಕ್ ಸ್ವಾತಂತ್ರ್ಯ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಶರಣ್ ಪಾಂಪ್ ವೆಲ್ ಮೇಲೆ 22 ಪ್ರಕರಣಗಳಲ್ಲಿ 15 ಪ್ರಕರಣಗಳನ್ನು ನ್ಯಾಯಾಲಯ ಈಗಾಗಲೇ ವಜಾ ಮಾಡಿದೆ ಇನ್ನು 7 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ನೀಡಿದೆ ಆದರೆ ಇದನ್ನು ಗಮನಿಸದೇ ಜಿಲ್ಲಾಡಳಿತ ಕಾನೂನು ಉಲ್ಲಂಘಿಸಿ ಅಸಂವಿಧಾನಿಕವಾಗಿ ಒಬ್ಬ ಸಮಾಜಮುಖಿ ಹೋರಾಟಗಾರರನ್ನು ಜಿಲ್ಲೆಗೆ ಬಾರದಂತೆ ನಿರ್ಬಂಧ ಹೇರಿದ್ದನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ
ಶರಣ್ ಪಂಪ್ ವೆಲ್ ಚಿಕ್ಕಮಗಳೂರು ಜಿಲ್ಲೆಗೆ ಮೊದಲ ಬಾರಿಗೆ ಬರುತ್ತಿಲ್ಲ ಸುಮಾರು 20 ವರ್ಷಗಳಿಂದ ಜಿಲ್ಲೆಗೆ ನಿರಂತರವಾಗಿ ಬರುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಘಟನೆ ವಿಸ್ತಾರ ದೃಷ್ಟಿಯಿಂದ ಬೈಠಕ್ ಆಯೋಜನೆ ಮಾಡಲಾಗಿತ್ತು ಈ ಬೈಠಕ್ ಯಾವುದೇ ವೇದಿಕೆ ಕಾರ್ಯಕ್ರಮ ಆಗಿರಲಿಲ್ಲ ಆದರೆ ಈವರೆಗೆ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಲ್ಲಿ ರಕ್ತದ ಅಭಾವ ಹೆಚ್ಚಿರುವುದರಿಂದ ಜಿಲ್ಲಾಧ್ಯಂತ ಶಿಬಿರ ಮಾಡುವುದರ ಬಗ್ಗೆ ಈ ಬೈಠಕ್ ಯೋಜನೆ ಮಾಡಲಾಗಿತ್ತು. ಜಿಲ್ಲಾಡಳಿತ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾರನ್ನೋ ಮೆಚ್ಚಿಸುವ ಸಲುವಾಗಿ ಕಾನೂನನ್ನು ಗಾಳಿಗೆ ತೂರಿದ್ದಾರೆ.ಹಾಗಾಗಿ ಅಸಂವಿಧಾನಕವಾಗಿ ನಡೆದುಕೊಳ್ಳುತ್ತಿರುವ ಜಿಲ್ಲಾಡಳಿತ ವಿರುದ್ಧ ನಾವು ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ

ಚಿಕ್ಕಮಗಳೂರು ಜನರು ಶಾಂತಿಯುತ ಜನರು ಎಂದು ಅರಿಯಬೇಕಿದೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಮಾಜದಲ್ಲಿ ಸಂಘಟನೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಆದರೆ ಅದನ್ನು ಸಹಿಸದೆ ಹೋರಾಟದ ಸ್ವರೂಪವನ್ನು ಜಿಲ್ಲಾಡಳಿತವೇ ಬದಲಾಯಿಸಲು ಹೊರಟಿದೆ. ನಾವು ಇದನ್ನು ನ್ಯಾಯಾಲಯದ ಮೊರೆ ಹೋಗಿ ಪ್ರಶ್ನಿಸಲಾಗುವುದು ನ್ಯಾಯಾಲದ ಮೇಲೆ ನಮಗೆ ನಂಬಿಕೆ ಇದೆ ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ ಆ ಸಂವಿಧಾನವಾಗಿ ನಡೆದುಕೊಳ್ಳುತ್ತಿರುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಜಿಲ್ಲಾ ಕಾರ್ಯದರ್ಶಿ ರಂಗನಾಥ್ ತಿಳಿಸಿದರು.