ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿಗೆ ನೂತನ ರೈಲಿಗೆ ಚಾಲನೆ ಸಿಕ್ಕಿದ್ದು , ತಿರುಪತಿಗೆ ಹೊರಟ್ಟಿದ್ದ ಹೊಸ ರೈಲಿಗೆ ಓರ್ವ ಅಜ್ಜಿ ಅಡ್ಡ ಬಿದ್ದು ದೀರ್ಘ ದಂಡ ನಮಸ್ಕರಿಸಿ ಭಕ್ತಿ ಭಾವ ಮೆರೆದರು.

ಚಿಕ್ಕಮಗಳೂರು – ತಿರುಪತಿ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮ ರೈಲ್ವೆ ನಿಲ್ದಾಣದಲ್ಲಿ ಆಯೋಜನೆ ಗೊಂಡಿತ್ತಿ . ಈ ವೇಳೆ ತಿರುಪತಿಗೆ ಹೊಸ ರೈಲು ಆರಂಭಗೊಂಡ ಸಂತೋಷಕ್ಕೆ ಹಿರೇಮಗಳೂರಿನ ನಿವಾಸಿ ಲಕ್ಷ್ಮೀ ಬಾಯಿ ಧೀರ್ಘದಂಡ ನಮಸ್ಕಾರ ಮಾಡಿದ್ದಾರೆ.
ಹಿರೇಮಗಳೂರಿನ ನಿವಾಸಿ ಲಕ್ಷ್ಮೀ ಬಾಯಿ, ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ತಮ್ಮ ಮನೆದೇವರಾದ ತಿರುಪತಿ ವೆಂಕಟೇಶ್ವರನ ದರ್ಶನಕ್ಕಾಗಿ ತೆರಳುತ್ತಾರೆ. ಇದೀಗ ಚಿಕ್ಕಮಗಳೂರಿನಿಂದ ತಿರುಪತಿಗೆ ನೇರವಾಗಿ ರೈಲು ಸಂಚಾರ ಪ್ರಾರಂಭವಾದ ಹಿನ್ನಲೆಯಲ್ಲಿ ಲಕ್ಷ್ಮೀ ಬಾಯಿ, ರೈಲಿಗೆ ಭಕ್ತಿಯಿಂದ ನಮಸ್ಕಾರ ಮಾಡಿದ್ದಾರೆ.