ಮೂಡಿಗೆರೆ: ತಾಲೂಕಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಚ್. ಎನ್ ಪ್ರಸಾದ್ ಅಧಿಕಾರ ಸ್ವೀಕಾರ ಮಾಡಿದರು.

ಮೂಡಿಗೆರೆಯ ಜೆಸಿ ಭವನದಲ್ಲಿ ಏರ್ಪಾಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಅಧಿಕಾರ ಸ್ವೀಕಾರ ಮಾಡಿದರು. ಆನಂತರ ಅವರು ಮಾತನಾಡಿ ರೋಟರಿ ಸಂಸ್ಥೆಯಿಂದ ಪೊಲಿಯೋ ಲಸಿಕಾ ಕಾರ್ಯಕ್ರಮ ಏರ್ಪಾಟ್ಟಿದ್ದು ಜನ ಇಂದಿಗೂ ನೆನೆಯುತ್ತಾರೆ ಹಾಗೆ ಇಂತಹ ಕಾರ್ಯಕ್ರಮಗಳನ್ನ ಮಾಡಿ ಜನರಿಗೆ ಮಾದರಿಯಾಗೋಣ ಅಲ್ಲದೆ ಜನಪರ ಕಾರ್ಯಕ್ರಮಗಳನ್ನ ಮಾಡುತ್ತಾ ಇರೋಣ.
ಹಾಗೆ ಮೂಡಿಗೆರೆ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಇರುವುದನ್ನು ನಾವು ಅರಿತ್ತಿದ್ದೇವೆ ಹಾಗೆ ಟ್ರಾಫಿಕ್ ಪೊಲೀಸರ ಜೊತೆಗೂಡಿ ಸಂಚಾರಿ ನಿಯಮ ಪಾಲಿಸಲು ಜನರಿಗೆ ಅರಿವು ಮೂಡಿಸೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪಾಸಭಾಪತಿ ಎಂ.ಕೆ.ಪಾಣೇಶ್, ರೋಟರಿ ನಿಕಟಪೂರ್ಮೂವ ಕಾರ್ಕೆಯದರ್ಶಿ ನವೀನ್, ವಲಯ ಲೆಫ್ಟಿನೆಂಟ್ ಆದರ್ಶ ಸೇರಿ ಹಲವರು ಉಪಸ್ಥಿತರಿದ್ದರು.