ಕಡೂರು : ನವಿಲೊಂದು ಹಾರುವಾಗ ಸರ್ಕಾರಿ ಬಸ್ಸಿಗೆ ಡಿಕ್ಕಿಯೊಡೆದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಚ್ಚೇರಿ ಬಳಿ ನಡೆದಿದೆ.

ಕಡೂರಿನಿಂದ ಬೆಂಗಳೂರಿಗೆ ಹೊರಟಿದ್ದ ಬಸ್ʼಗೆ ನವಿಲು ಹಾರುವಾಗ ಡಿಕ್ಕಿಯಾಗಿದ್ದು ಈ ವೇಳೆ ಬಸ್ಸಿನ ಗಾಜು ಪೀಸ್ ಪೀಸ್ ಆಗಿದ್ದು ಹಾಗೆ ಡಿಕ್ಕಿಯ ರಭಸಕ್ಕೆ ನವಿಲು ಸ್ಥಳದಲ್ಲೇ ಸಾವನ್ನಪ್ಪಿದೆ.
ನವಿಲನ್ನು ಕಂಡು ತಕ್ಷಣ ಚಾಲಕ ಬಸ್ ನಿಲ್ಲಿಸಿದ್ರು ಕೂಡ ಬಸ್ಸಿನ ಗಾಜಿಗೆ ಡಿಕ್ಕಿ ಹೊಡೆದು ನವಿಲು ಸಾವನ್ನಪ್ಪಿದ್ದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾಋಎ.