Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಚಿಕ್ಕಮಗಳೂರು ಡಿಸಿ ವರ್ಗಾವಣೆಗೆ ಒತ್ತಾಯ:VHP ಮುಖಂಡರ ವಿರುದ್ಧ SDPI ಆಕ್ರೋಶ

ಚಿಕ್ಕಮಗಳೂರು ಡಿಸಿ ವರ್ಗಾವಣೆಗೆ ಒತ್ತಾಯ:VHP ಮುಖಂಡರ ವಿರುದ್ಧ SDPI ಆಕ್ರೋಶ

ಚಿಕ್ಕಮಗಳೂರು: ಜಿಲ್ಲಾಧಿಕಾರಿಯ ವರ್ಗಾವಣೆಗೆ VHP ಯ ಒತ್ತಡ ರಾಜಕಾರಣವನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದಲ್ಲದೇ ಹಾಗೆ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲವನ್ನು ನಾವು ಸೂಚಿಸುತ್ತೇವೆ ಎಂದು ಜಿಲ್ಲಾ SDPI ಕಾರ್ಯಕರ್ತ ಸೈಯದ್ ಅಜ್ಮತ್ ಪ್ರಕಟಣೆ ಹೊರಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿಯ ವಿರುದ್ಧ ವಿ.ಹಿಂ.ಪ. ನಾಯಕರು ಮಾಡಿರುವ ಅಧಾರವಿಲ್ಲದ, ಧರ್ಮಾಧಾರಿತ ಆರೋಪಗಳನ್ನು ತೀವ್ರವಾಗಿ ಖಂಡಿಸುತ್ತದೆ. ಹಾಗೆ ಜಿಲ್ಲಾಧಿಕಾರಿ ಎಂಬವರು ಹಿಂದು ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂಬ ವಿಎಚ್‌ಪಿಯ ಆರೋಪ ತಾರತಮ್ಯಪೂರ್ಣವಾಗಿದ್ದು, ಯಥಾರ್ಥದಿಂದ ದೂರವಾಗಿದೆ. ಇದು ನ್ಯಾಯವಿರೋಧಿ ಅಧಿಕಾರಿಗಳನ್ನು ಗುರಿಯಾಗಿಸುವ, ಹಾಗೂ ಸಮಾಜದಲ್ಲಿ ಧರ್ಮಾಧಾರಿತ ವಿಭಜನೆ ಉಂಟುಮಾಡುವ ಕುತಂತ್ರವಾಗಿದೆ ಎಂದು ವಿಎಚ್‌ ಪಿ ವಿರುದ್ಧ ಕಿಡಿಕಾರಿದರು.

ಜಿಲ್ಲಾಧಿಕಾರಿಯವರು ಸಂವಿಧಾನಬದ್ಧ ಪ್ರಜಾಪ್ರಭುತ್ವದ ನಿಯಮಾನುಸಾರ ಮತ್ತು ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ಉದ್ದೇಶದಿಂದ, ಹೊಂದಾಣಿಕೆಗೆ ನಿಲ್ಲದಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಂಡಿರುವುದು ಸರಿಯಾದ ನಿರ್ಧಾರ. ಹಾಗೆ ವಿ.ಹಿಂ.ಪ.ಯವರು ಹೇಳಿದ ಶರಣ್ ಪಂಪವೆಲ್ ಎಂಬಾತನು ಒಂದು ರೌಡಿ ಶೀಟರ್, ಹಿಂಸಾತ್ಮಕ ಮತ್ತು ಪ್ರಚೋದನಾತ್ಮಕ ಭಾಷಣಗಳಿಗಾಗಿ ಜನತೆಯ ಕಳವಳಕ್ಕೆ ಕಾರಣನಾಗಿದ್ದನು. ಇಂತಹ ವ್ಯಕ್ತಿಗೆ VHP ಬೆಂಬಲ ನೀಡುತ್ತಿರುವುದು, ಜಿಲ್ಲಾಡಳಿತವನ್ನು ಬೆದರಿಸಲು ನಡೆಸುತ್ತಿರುವ ದುರುದ್ದೇಶಪೂರ್ಣ ಯತ್ನವಾಗಿದೆ ಎಂದರು.

ಎಸ್‌ಡಿಪಿಐ ಪಕ್ಷವು ಜಿಲ್ಲಾಧಿಕಾರಿಯ ನಿಷ್ಠಾವಂತ ಆಡಳಿತ ಮತ್ತು ನ್ಯಾಯಪಾಲನೆಗೆ ಒತ್ತಾಸೆ ನೀಡುತ್ತದೆ. ಎಸ್‌ಡಿಪಿಐ ಚಿಕ್ಕಮಗಳೂರನ್ನು ಶಾಂತಿ, ಸಾಮರಸ್ಯ, ಮತ್ತು ಸಂವಿಧಾನಬದ್ಧ ಮೌಲ್ಯಗಳಿಗಾಗಿ ಸದಾ ಹೋರಾಡುತ್ತಲೇ ಇರುತ್ತದೆ ಆದ ಕಾರಣ ಜಿಲ್ಲಾದಿಕಾರಿ ವಿರುದ್ಧ ಹಗೆ ಸಾಧಿಸಿದ್ದು ಸಮಂಜಸವಲ್ಲವೆಂದು ಹೇಳಿದರು.

ಹಾಗೆ SDPI ಚಿಕ್ಕಮಗಳೂರು ಇವರು ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರಿಗೆ ಈ ಕೆಳಗಿನ ಬೇಡಿಕೆಗಳನ್ನ ಇಟ್ಟಿರುತ್ತಾರೆ.

• ಧಾರ್ಮಿಕ ಆಧಾರದ ಮೇಲೆ ನೀಡಲ್ಪಡುವ ಯಾವ ಅರ್ಜಿಗೂ ಮನ್ನಣೆ ನೀಡಬಾರದು.
• ಜಿಲ್ಲೆಯ ಅಧಿಕಾರಿಗಳಿಗೆ ಕಾನೂನುಬದ್ಧ ರಕ್ಷಣೆಯು ಸಿಗಲಿ.
• ಹಿಂಸಾತ್ಮಕ, ಧರ್ಮಪರ ಪ್ರಚೋದನೆ ನೀಡುತ್ತಿರುವ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳಲಿ.


RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!