ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರವನ್ನು ಕಾಣಲು ಸಾಧ್ಯವಿಲ್ಲ. ಆ ಮಟ್ಟಿಗಿನ ಒಳ್ಳೆಯ ಆಡಳಿತವನ್ನು ನರೇಂದ್ರ ಮೋದಿ ನೀಡುತ್ತಾ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಹೌದು ..ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಯೂಥ್ ಫಾರ್ ನೇಷನ್ ಸಂಘಟನೆಯಿಂದ ಶನಿವಾರ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಸರ್ಕಾರದ ಸಂಕಲ್ಪ-ಸಾಧನೆಗಳ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕಳೆದ11 ವರ್ಷದಲ್ಲಿ ಮೋದಿಯವರು ಕೆಟ್ಟ ಆಡಳಿತ ಮಾಡಲು ಇಲ್ಲ ಮುಂದೆಯೂ ನೋಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ನಾವು ನೀಡುವ ಆಡಳಿತದಲ್ಲಿ ಜನರಿಗೆ ನಂಬಿಕೆ ಬರಬೇಕು ಎಂದರೆ ಅದು ನಾವು ನೀಡುವ ಒಳ್ಳೆಯ ಆಡಳಿತದಿಂದ ಮಾತ್ರ ಸಾಧ್ಯವಾಗುತ್ತದೆ. ಕಳೆದ 11 ವರ್ಷದ ಅವಧಿಯಲ್ಲಿ ದೇಶದಲ್ಲಾಗಿರುವ ಬದಲಾವಣೆಗಳನ್ನು ನಾವು ಪಿಪಿಟಿ ಮೂಲಕ ಹೇಳುವ ಅಗತ್ಯವಿಲ್ಲ. ಪರಿಜ್ಞಾನ ಇರುವವರು, ಕಾಂಗ್ರೆಸ್ ಸೇರದಿರುವ ಪ್ರತಿಯೊಬ್ಬರೂ ದೇಶದಲ್ಲಿ ಉತ್ತಮ ಬದಲಾವಣೆಯಾಗಿದೆ ಎನ್ನುತ್ತಿದ್ದಾರೆ. ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಬದಲಾವಣೆ ಅನುಭವಕ್ಕೆ ಬರುತ್ತಿದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಉತ್ತೇಜನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಸಂಶೋಧನೆಗೆಂದು ಹತ್ತಾರು ಖಾಸಗಿ ಕಂಪನಿಗಳಿಗೆ ಅನುದಾನ ಮತ್ತು ಸವಲತ್ತುಗಳನ್ನು ನೀಡಿ ಈ ಕ್ಷೇತ್ರದಲ್ಲಿ ಭಾರತವನ್ನು ಜಗತ್ತಿನ ನಾಯಕನನ್ನಾಗಿಸಲು ಮುಂದಡಿ ಇಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ ದೃಷ್ಠಿಯಲ್ಲಿಟ್ಟುಕೊಂಡು ಪಿಎಂ ಸ್ವನಿಧಿ ಯೋಜನೆಯಡಿ10 ಸಾವಿರದಿಂದ 1 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಜಾಹಿರಾತು ನೀಡಿದರೆ ಜನರು ಮತ ಹಾಕುತ್ತಾರೆ ಎನ್ನುವ ಮನಸ್ಥಿತಿಯಿಂದ ಅಭಿವೃದ್ಧಿ, ಒಳ್ಳೆಯ ಆಡಳಿತ ಎನ್ನುವುದು ಜನರ ಅನುಭವಕ್ಕೆ ಬರುವಂತಾಗಿರುವುದು ಕಳೆದ 11 ವರ್ಷದ ಅವಧಿಯಲ್ಲಿ ಎಂದರು.
ಆ ನಂತರ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಭಾರತ ವಿಶ್ವಗುರು ಆಗಬೇಕಾದರೆ ವಿಕಸಿತ ಭಾರತವಾಗಬೇಕು. ಹೀಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತದ ಸಂಕಲ್ಪ ಭಾರತದ ಸಂಕಲ್ಪವಾಗಬೇಕು ಎಂದು ಕರೆನೀಡಿದ್ದರು. ಈ ದೇಶದ ಪ್ರತಿಯೊಬ್ಬರೂ ಈ ಸಂಕಲ್ಪ ತೊಟ್ಟರೆ ಅವರ ಬದುಕಿನಲ್ಲಿ ಬದಲಾವಣೆ ಬರುತ್ತದೆ. ಆಗ ಭಾರತ ಒಂದು ಹೆಜ್ಜೆ ಮುಂದೆ ಹೋಗುತ್ತದೆ ಎಂದು ಹೇಳಿದರು.
ಹಾಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಸಮರ್ಥ, ಸಮೃದ್ಧ ಭಾರತ ನಿರ್ಮಾಣ ಮಾಡಬೇಕು ಎಂದು ನಮ್ಮ ಹಿರಿಯರು ಬಿಜೆಪಿ ಹುಟ್ಟುಹಾಕಿದ್ದಾರೆ. ಅಧಿಕಾರದ ಹಿಡಿಯಬೇಕು ಎಂಬ ಉದ್ದೇಶದಿಂದ ಪಕ್ಷ ಹುಟ್ಟುಹಾಕಿಲ್ಲ. ಆದರೆ ಅಧಿಕಾರದ ಜವಾಬ್ದಾರಿ ಬಂದರೆ ಮಾತ್ರ ದೇಶ ಕಟ್ಟಲು ಸಾಧ್ಯ ಇದೇ ಕಾರಣದಿಂದಲೇ ಕಳೆದ ೧೧ ವರ್ಷದಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವನ್ನು ಕಟ್ಟಿತೋರಿಸುತ್ತಿದ್ದಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಯೂಥ್ ಫಾರ್ ನೇಷನ್ ಸಂಚಾಲಕ ಸಂತೋಷ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಿ.ಎನ್.ಜೀವರಾಜ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಸೇರಿ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.