ಸಕಲೇಶಪುರ: ತಾಲೂಕಿನ ದೇವಾಲಕೆರೆ ಪಂಚಾಯಿತಿಯ ನೀಕನಹಳ್ಳಿ ಗ್ರಾಮದ ಏರ್ಟೆಲ್ ಹಾಗೂ ಬಿಎಸ್ಎನ್ಎಲ್ ಟವರ್ ದುರಸ್ಥಿಗೆ ಗ್ರಾಮಸ್ಥರು ಒತಾಯಿಸಿದ್ದಾರೆ..
ಈ ಕುರಿತು ಸುದ್ದಿಗಾರರೊಂದಿಗೆ ಪ್ರದ್ಯುಮ್ನ ಗೌಡ ಮಾತನಾಡಿ ನಾಮಕಾವಸ್ತೆ ರೀತಿ ಮಾತ್ರ ಟವರ್ ಇದ್ದು ಇದರ ಉಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ, ತಿಂಗಳಿಗೆ ನಾಲ್ಕು ಬಾರಿ ಮಾತ್ರ ನೆಟ್ವರ್ಕ್ ಲಭ್ಯವಿದ್ದು ಉಳಿದ ದಿನಗಳಲ್ಲಿ ನೆಟ್ ವರ್ಕ್ ಮರ ಹತ್ತುವ ಸ್ಥಿತಿ ಬಂದಿದೆ ಎಂದರು.
ಹಾಗೆ ಗ್ರಾಮಸ್ಥರಾದ ಕೀರ್ತಿ ಗೌಡ ವಾಜಿಗೆ ಮಾತನಾಡಿ. ನಮ್ಮ ಗ್ರಾಮದ ಸುತ್ತ ಮುತ್ತ ಈ ಸಮಸ್ಸೆಯೆ ಹಲವು ವರ್ಷಗಳಿಂದ ಇದ್ದು ಅನೇಕ ಬಾರಿ ದೂರಿದ್ದರು ಏನು ಪ್ರಯೋಜನ ಕಾಣುತ್ತಿಲ್ಲ, ಹಳ್ಳಿ ಭಾಗಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಇರುವುದರಿಂದ.. ಮಾಹಿತಿ ನೀಡಲು ನೆಟ್ವರ್ಕ್ ತುಂಬಾ ಅವಶ್ಯಕತೆ ಇದ್ದು ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದರು
ಈ ಸಂದರ್ಭದಲ್ಲಿ ದೇವಾಲಕೆರೆ, ವಾಜಿಗೆ, ನೀಕನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.
