Tuesday, August 11, 2026
Homeಜಿಲ್ಲಾಸುದ್ದಿಸಕಲೇಶಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಕಚೇರಿ ಲೋಕಾರ್ಪಣೆ!

ಸಕಲೇಶಪುರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಕಚೇರಿ ಲೋಕಾರ್ಪಣೆ!

Telegram Group
Join Now

ಸಕಲೇಶಪುರ: ಪಟ್ಟಣದಲ್ಲಿ ಟೋಲ್ ಗೇಟ್ ಭೈರೇಶ್ವರ ಕಾಂಪ್ಲೇಂಕ್ಸ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೂತನ ಕಚೇರಿಯನ್ನು ಕರವೇ ರಾಜ್ಯಧ್ಯಕ್ಷ ಟಿ. ಎ.ನಾರಾಯಣ ಗೌಡ ಉದ್ಘಾಟಿಸಿದರು

ಬಳಿಕ ಮಾತನಾಡಿ ಕನ್ನಡ ಭಾಷೆ ಹಾಗೂ ರಾಜ್ಯ ವನ್ನು ಉಳಿಸುವುದು ಕನ್ನಡಿಗರಾದ ನಮ್ಮೆಲ್ಲರ ಆದ್ಯ ಕರ್ತವ್ಯ, ಈ ನಿಟ್ಟಿನಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರ ಕಾರ್ಯ ವೈಖರಿ ಶ್ಲಾಘನೀಯ, ಕನ್ನಡ ಪರಂಪರೆ ಇಡಿ ವಿಶ್ವಕ್ಕೆ ಸಾರುವ ಕೆಲಸ ನಾವೆಲ್ಲರೂ ಸೇರಿ ಮಾಡೋಣ ಎಂದರು.

ಹಾಗೆ ಕರವೇ ತಾಲ್ಲೂಕು ಅಧ್ಯಕ್ಷ ಗಗನ್ ಹಾಡ್ಲಹಳ್ಳಿ ಮಾತನಾಡಿ ತಾಲ್ಲೂಕಿನ ಹಳ್ಳಿ ಹಳ್ಳಿಗಳಲ್ಲೂ ಕರವೇ ಕಾರ್ಯಕರ್ತರ ಸೇವೆ ಅಮೂಲ್ಯವಾಗಿದೆ. ನಿಮ್ಮಗಳ ಸಹಕಾರ ಸಂಘಟನೆ ಮುಖ್ಯ, ಪ್ರತಿ ಸದಸ್ಯನು ತಾಲೂಕು ಅಧ್ಯಕ್ಷ ಇದ್ದಂತೆ ಎಂದದು ಹೇಳಿದರು

.
ಈ ಸಂಧರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಿ.ಡಿ. ಮನು ಕುಮಾರ್,ಸಂಘಟನೆ ಉಸ್ತುವಾರಿ ರಘು ಪಾಳ್ಯ, ತನುಗೌಡ. ಕಾರ್ಯದರ್ಶಿ ನವೀನ್ ನಲಗಹಳ್ಳಿ, ಸದಸ್ಯರಾದ ಸುನಿಲ್ ದೇವಾಲಕೆರೆ, ಸಿಂಧು, ಸಂಭ್ರಮ್ ಕುಂಟಳ್ಳಿ, ರತನ್ ಮರಗುಂದ ಸೇರಿದಂತೆ ಕರವೇ ಕಾರ್ಯಕರ್ತರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments