Friday, March 27, 2026
Homeಜಿಲ್ಲಾಸುದ್ದಿಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಕ್ರಮಕೈಗೊಳ್ಳುತ್ತೇವೆ: ಮಾಜಿ ಸಚಿವ ಕುಮಾರ್‌ ಬಂಗಾರಪ್ಪ

ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಕ್ರಮಕೈಗೊಳ್ಳುತ್ತೇವೆ: ಮಾಜಿ ಸಚಿವ ಕುಮಾರ್‌ ಬಂಗಾರಪ್ಪ

ಹಾಸನ : ಈಗಾಗಲೇ ಅಕ್ರಮ ವಲಸಿಗರ ಬಗ್ಗೆ ಕಾನೂನುಗಳು 1955ರಲ್ಲಿ ಬದಲಾಯಿತು 2025ರವಗೆರೂ ಕಾನೂನು ಬದಲಾವಣೆ ಆಗಿಲ್ಲ ವಕ್ಷ್, ವಾಲ್ಮೀಕಿ ಹಗರಣದ ವಿರುದ್ಧ ಯಶಸ್ವಿ ಹೋರಾಟ ನಡೆಸಿದ್ದೇವೆ. ನಮ್ಮ ತಂಡಕ್ಕೂ ಅದರ ಯಶಸ್ಸು ಸಲ್ಲುತ್ತದೆ ಎಂದು ಹಾಸನದಲ್ಲಿ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ, ಕುಂಬ್ರಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಹಲವೆಡೆ ಅಕ್ರಮವಾಗಿ ಬಾಂಗ್ಲಾ ವಲಸಿಗರು ಬಂದು ನೆಲೆಸಿದ್ದಾರೆ ಪೊಲೀಸ್ ಇಲಾಖೆಗೂ ಮಾಹಿತಿ ಇದೆ ವಾರ್ ರೂಂಗೆ ಸಾಕಷ್ಟು ಫೋನ್ ಕಾಲ್‌ಗಳು ಬಂದಿದ್ದವು. ಕೊಡಗು, ಹಾಸನ, ಚಿಕ್ಕಮಗಳೂರು, ಬಿಜಾಪುರ, ಬೆಂಗಳೂರಿನಿಂದ ಹೆಚ್ಚಿನ ಕರೆಗಳು ಬಂದಿದ್ದವು ಕೆಲವು ಫೋನ್ ಕಾಲ್ ರೆಕಾರ್ಡ್ ಮಾಡಿದ್ದೇವೆ ಕೆಲವು ಮಂದಿ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ ಎಂದರು.

ಹಾಗೆ ಇಂದು ಹಾಸನ ಜಿಲ್ಲೆಗೆ ಭೇಟಿ ನೀಡಿದ್ದೇವೆ ಸ್ಥಳೀಯ ಕಾರ್ಮಿಕರು ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ವಾರಪೂರ್ತಿ ಕೆಲಸ ಸಿಗುತ್ತಿತ್ತು, ವಲಸಿಗರಿಂದ ತೊಂದರೆಯಾಗುತ್ತಿದೆ ಮಾರ್ಕೆಟ್‌ನಲ್ಲೂ ಇಷ್ಟೇ ಬೆಲೆಗೆ ವಸ್ತುಗಳನ್ನು ಖರೀದಿ ಮಾಡುವ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ ಬಾಂಗ್ಲಾ ವಲಸಿಗರು ಅಸ್ಸಾಂ, ಬಿಹಾರ್ ಎಂದು ಹೇಳುತ್ತಿದ್ದಾರೆ ಫೇಕ್ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದಾರೆ ಅವರಿಗೆ ಟ್ರೈನಿಂಗ್ ಮಾಡಲಾಗಿದೆ ಗ್ರಾ.ಪಂ.ಯಿಂದ ಕೂಂಬಿಂಗ್ ಮಾಡಬೇಕು ನಮ್ಮ ಕನ್ನಡಿಗರಿಗೆ ಅನ್ಯಾಯ ಆಗಬಾರದು ನಮ್ಮ ಜನರಿಗೆ ರಕ್ಷಣೆ ಕೊಡಬೇಕುವಂಶವೃಕ್ಷ ಪರಿಶೀಲಿಸಬೇಕು, ಬಾರ್ಡರ್‌ನಲ್ಲಿ ಬಿಗಿ ಮಾಡಬೇಕು ಸರ್ಕಾರ, ಗ್ರಾ.ಪಂ. ಗಳು ತ್ವರಿತವಾಗಿ ಅವರ ದಾಖಲೆಗಳನ್ನು ಪರಿಶೀಲಿಸಬೇಕು ಅವರ ಫೋನ್ ಕಾಲ್‌ಗಳನ್ನು ಪರಿಶೀಲಿಸಬೇಕು ಎಂದರು

ಅದಾದ ನಂತರ ಅವರು ಎಸ್ಟೇಟ್ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ ದೊಡ್ಡ ದೊಡ್ಡ ಪ್ಲಾಂಟರ್ಸ್‌ಗಳು ಸ್ಥಳೀಯರಿಗೆ ಕೆಲಸ ಕೊಡಬೇಕು ಕನ್ನಡಿಗರ ಸೂಕ್ತ ರಕ್ಷಣೆ ನೀಡಿ ಅವರಿಗೆ ಕೆಲಸ ಕೊಡಬೇಕು ಅಕ್ರಮ ಬಾಂಗ್ಲಾ ವಲಸಿಗರಲ್ಲ ದೇಶದ ಭದ್ರತೆಗೆ ಕುತ್ತು ತಂದಿದ್ದಾರೆ ಪಹಲ್ಗಾಮ್‌‌ ನಡೆದ ಘಟನೆ ನಂತರ ನಾವೆಲ್ಲರೂ ಕೂಡ ಆತಂಕದಲ್ಲಿದ್ದೇವೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ, ಪೊಲೀಸರಿಗೆ ಸರ್ಕ್ಯೂಲರ್ ಕಳುಹಿಸಿಕೊಟ್ಟಿದ್ದಾರೆ ಅಕ್ರಮ ವಲಸಿಗರನ್ನು ಹೊರಗಡೆ ಹಾಕಬೇಕು ಮೇ.2 ರಂದು ಸರ್ಕ್ಯೂಲರ್ ಕಳುಹಿಸಿದ್ದಾರೆ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಇದು ಸೂಕ್ಷ್ಮವಾದಂತಹ ವಿಚಾರ ಗಮನಿಸುತ್ತೇವ ಎಂದು ಅಲ್ಲಿನ ಸ್ಥಳೀಯರಿಗೆ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!