ಸಕಲೇಶಪುರ: ಬಾಳ್ಳುಪೇಟೆ ಗ್ರಾಮದಲ್ಲಿರುವ ಖಾಸಗಿ ಬ್ಲಾಸಂ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ದಿವಾಕರ್‌ಗೌಡ ಎಂಬ ಬಾಲಕನಿಗೆ ಶಿಕ್ಷಕಿ ಥಳಿಸಿರುವ ಘಟನೆ ನಡೆದಿದೆ.

ಮಡಬಲು ಗ್ರಾಮದ ಕೂಲಿ ಕೆಲಸ ಮಾಡುವ ರಂಗಸ್ವಾಮಿ–ಕಾವ್ಯ ದಂಪತಿಯ ಪುತ್ರನಾದ ದಿವಾಕರ್‌ಗೌಡನನ್ನು, ಬಾಸುಂಡೆ ತರಲು ಮನಸ್ಸೋಯಿಸದ ಕಾರಣಕ್ಕಾಗಿ ಶಿಕ್ಷಕಿ ರಜನಿ ಥಳಿಸಿದ್ದಾಗಿ ಪೋಷಕರು ಆರೋಪಿಸುತ್ತಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿ ಈ ರೀತಿ ವರ್ತಿಸಿದ್ದಾಗಿ ಮಕ್ಕಳ ಪೋಷಕರು ದೂರಿದ್ದಾರೆ. ಥಳಿತದಿಂದ ಗಾಯಗೊಂಡ ಬಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.