ಮೂಡಿಗೆರೆ: ತಾಲೂಕಿನ ಗೋಣಿಬೀಡು ಹೋಬಳಿ ಕುಂಬರಡಿ ಗ್ರಾಮದ ಕ್ರೀಡಾ ಮೈದಾನವನ್ನು ಉಳಿಸಿಕೊಡುವಂತೆ ಕುಂಬರಡಿ ಗ್ರಾಮದ ಯುವಕ ನವೀನ್ ಗೌಡ ಒತ್ತಾಯಿಸಿದ್ದಾರೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಾರಂತ್ಯದಲ್ಲಿ ಪ್ರವಾಸಿಗರು ವಿಶ್ರಾಂತಿಯ ನೆಪದಲ್ಲಿ ರೆಸಾರ್ಟ್ ಗಳಿಗೆ ಬಂದು ಗ್ರಾಮದ ಮೈದಾನದಲ್ಲಿ ಆಫ್ ರೋಡ್ ರ್ಯಾಲಿ ಮಾಡುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಪ್ರವಾಸಿಗರನ್ನು ಪ್ರಶ್ನಿಸಿದರೆ ಗಲಾಟೆಗೆ ಬರುತ್ತಾರೆ ಎಂದರು
ಹಾಗೆ ಪ್ರಭಾವಿ ವ್ಯಕ್ತಿಗಳ ಪರಿಚಯ ನಮಗಿದೆ ಎನ್ನುತ್ತಾರೆ, ಇವರಿಂದ ಗ್ರಾಮದ ಏಕೈಕ ಮೈದಾನ ಹಾಳಾಗುತ್ತಿದ್ದೂ ರ್ಯಾಲಿ ಮಾಡುವ ಜಾಗವಲ್ಲ ಇಂತವರಿಂದ ಕಾಡು ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ, ಪ್ರವಾಸಿಗರ ವೈಯಕ್ತಿಕ ಸಂತೋಷಕ್ಕಾಗಿ ಪರಿಸರ ಹಾಳು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು
ಅದಲ್ಲದೇ ಮೈದಾನದಲ್ಲಿ ಯುವಕರು ಮಕ್ಕಳು ಆಟವಾಡಲು ಸಾಧ್ಯವಾಗುತ್ತಿಲ್ಲ.ಹಿರಿಯರು ವಾಯು ವಿಹಾರಕ್ಕಾಗಿ ಈ ಮೈದಾನವನ್ನು ಬಳಸುತ್ತಿದ್ದೂ. ಕೆಲವರಿಗೆ ಕಾಲು ಉಳುಕಿದ್ದು ಸಹ ಕಂಡು ಬಂದಿದೆ ಇದರಿಂದಾಗಿ ಜಾನುವಾರುಗಳ ಮೇವಿಗೂ ಕಡಿವಾಣ ಹಾಕಿದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.