ಚಿಕ್ಕಮಗಳೂರು: ನಗರ ಸಮೀಪದ ಗಿರಿಪ್ರದೇಶದಲ್ಲಿ ಧಾರಾಕಾರ ಮಳೆಸುರಿಯುತ್ತಿದ್ದು, ಇದರ ನಡುವೆಯೇ ಗಿರಿಭಾಗಕ್ಕೆ ಭಾರೀ ಪ್ರವಾಸಿಗರ ದಂಡು ಆಗಮಿಸಿದ್ದು ಗಿರಿಯಲ್ಲಿ ವಾಹನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಾಯಿತು.

ಕಾರು, ಬೈಕ್, ಟಿಟಿ ಸೇರಿದಂತೆ 1850 ವಾಹನಗಳು ಗಿರಿಭಾಗಕ್ಕೆ ಪ್ರವಾಸಿಗರನ್ನು ಕರೆದೊಯ್ದಿದೆ. ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು-ಜೀಪ್ ಮುಖಾಮುಖಿ ಡಿಕ್ಕಿಯಾಗಿದ್ದು,ಎರಡು ವಾಹನದ ಮುಂಭಾಗ ಜಖಂಗೊಂಡಿದೆ.
ಕಾರು ಮುಳ್ಳಯ್ಯನಗಿರಿಯಿಂದ ಕೆಳಗೆ ಇಳಿಯುವಾಗ ಮಾರ್ಗ ಮಧ್ಯೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ.ಗಿರಿಯಲ್ಲಿ ವಾಹನ ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಾಯಿತು.
ವಾಹನಗಳನ್ನು ನಿಯಂತ್ರಿಸಲಾಗದೆ 2 ಗಂಟೆಗಳ ಕಾಲ ವಾಹನಗಳನ್ನು ಪೊಲೀಸರು ತಡೆಹಿಡಿಯ ಬೇಕಾಯಿತು.ಗಿರಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾದ ಮೇಲೆ ಮತ್ತೆ ವಾಹನಗಳನ್ನ ಬಿಡಲಾಗಿದೆ. ಪೊಲೀಸರು ಸುರಿಯುತ್ತಿರೋ ಮಳೆ ನಡುವೆಯೇ ಪೊಲೀಸರು ವಾಹನ ನಿಯಂತ್ರಿಸಲು ಮುಂದಾಗಬೇಕಾಯಿತು.
ಸ್ಥಳೀಯ ವಾಹನಗಳನ್ನು ಹೊರತುಪಡಿಸಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12ಗಂಟೆಯವರೆಗೆ 600 ವಾಹನಗಳನ್ನು ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ 600 ವಾಹನಗಳನ್ನು ಬಿಡುತ್ತಿದ್ದು, ಆಗ ವಾಹನ ದಟ್ಟಣೆ ಕಡಿಮೆಯಾಗುವ ಸಾಧ್ಯತೆಗಳಿವೆ.