ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕು ಕಚೇರಿಯಲ್ಲಿ ಕೂರಲು ಕುರ್ಚಿಗಳಿಲ್ಲ, ಪ್ರತಿನಿತ್ಯ ನೂರಾರು ಜನರು ವಿವಿಧ ಕಾರ್ಯಗಳಿಗೆ ತಾಲೂಕ ಕಚೇರಿಗೆ ಬರುತ್ತಾರೆ. ಅದರಲ್ಲೂ ಮಹಿಳೆಯರಿಗೆ ವಯಸ್ಕರಿಗೆ ತೊಂದರೆಯಾಗುತ್ತಿದೆ ಎಂದು ದಲಿತ ಪರ ಸಂಘಟನೆ ಒಕ್ಕೂಟದ ಕಾರ್ಯಕರ್ತರು ಭಿಕ್ಷೆ ಬೇಡಿ ತಾಲೂಕು ಕಚೇರಿಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಅಜ್ಜಂಪುರ ಪಟ್ಟಣದ ಬಸ್ ನಿಲ್ದಾಣದ ಬಿ.ಎ.ಚ್ ರಸ್ತೆ, ಅಂಗಡಿ ಹೋಟೆಲ್ ಗಳಲ್ಲಿ ಸಂಘಟನೆ ಸದಸ್ಯರು ಜನರಿಂದ ಭಿಕ್ಷೆ ಎತ್ತಿ ಮಳೆ ಸುರಿಯುತ್ತಿದ್ದರು ಬೀದಿ ಬೀದಿ ತಿರುಗಿ 3500 ರೂಗಳನ್ನ ಭಿಕ್ಷೆ ಬೇಡಿ ಸಂಗ್ರಹಿಸಿದರು. ಅದರಲ್ಲಿ 2500 ರೂ. ವೆಚ್ಚದ ಎಂಟು ಚೇರ್ ಗಳನ್ನ ತಾಲೂಕು ಕಚೇರಿಗೆ ಕೊಡುಗೆಯಾಗಿ ನೀಡಿದ್ದಾರೆ.
ಸಾಮಾನ್ಯ ಜನರ ಹಿತಕ್ಕಾಗಿ ಸರಳವಾಗಿ ಮಾಡಿದ ಪ್ರತಿಭಟನೆ ಈಗ ಜನಸಾಮಾನ್ಯರ ನಡುವೆ ಚರ್ಚೆಗೆ ಗ್ರಾಸವಾಗಿದ್ದು ಅಧಿಕಾರಿಗಳ ನಿರ್ಲಕ್ಷ ಎದ್ದು ಕಂಡಿದೆ.ಇದಕ್ಕೆ ಜಿಲ್ಲಾಡಳಿತವೇ ಒಂದು ಸೂಕ್ತ ಪರಿಹಾರ ಒದಗಿಸಬೇಕಾಗಿದೆ.