ಚಿಕ್ಕಮಗಳೂರು: ವಿವಿಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿರುವ ಎಲ್ಲ ರೈತರ ನೆನಪಿಗಾಗಿ ರೈತರ ಹುತಾತ್ಮ ದಿನಾಚರಣೆಯನ್ನು ನಗರದ ಆಜಾದ್ ಸರ್ಕಲ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ವೈ ಸಿ ಸುನಿಲ್ ಕುಮಾರ್ ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಮಾಡಲಾಗುತ್ತಿದೆ.

ಹೌದು .. ಹುತಾತ್ಮ ರೈತರ ಹೋರಾಟ ರೈತ ಸಮೂಹದ ರಕ್ಷಣೆಗಾಗಿ ಮಾಡಿರುವ ಹೋರಾಟ ಇಂತಹ ಹೋರಾಟದಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 139 ಜನ ರೈತರು ಗೋಲಿಬಾರ್ ನಲ್ಲಿ ಪ್ರಾಣ ಕಳೆದುಕೊಂಡಿರುತ್ತಾರೆ ಪ್ರಥಮವಾಗಿ ನವಲಗುಂದ ನರಗುಂದದಲ್ಲಿ ಪ್ರಾರಂಭವಾದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಂತಹ ರೈತರ ಮತ್ತು ವಿವಿಧ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿರುವ ಎಲ್ಲ ರೈತರ ನೆನಪಿಗಾಗಿ ಈ ರೈತರ ಹುತಾತ್ಮ ದಿನಾಚರಣೆಯನ್ನು ಪ್ರತಿ ವರ್ಷ ಜುಲೈ 21ನೇ ತಾರೀಕು ರಾಜ್ಯದಾದ್ಯಂತ ಆಚರಿಸಲಾಗುತ್ತದೆ

ಹಾಗೆಯೇ ಇದುವರೆಗೂ ಹೋರಾಟದಲ್ಲಿ ತಮ್ಮ ಜೀವವನ್ನೇ ತ್ಯಾಗ ಮಾಡಿದ ರೈತರ ನೆನಪಿಗಾಗಿ ರೈತ ಹುತಾತ್ಮ ದಿನಾಚರಣೆಯನ್ನು ರಾಜ್ಯ ಅಧ್ಯಕ್ಷರ ಆದೇಶದಂತೆ ಆಜಾದ್ ಸರ್ಕಲ್ ಚಿಕ್ಕಮಗಳೂರು ಇಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲೂಕು ಸಮಿತಿ ವತಿಯಿಂದ ಎಲ್ಲಾ ಪದಾಧಿಕಾರಿಗಳು ಎಲ್ಲಾ ಸದಸ್ಯರು ಹಾಗೂ ರೈತರು ವಿವಿಧ ಸಂಘಟನೆಗಳು ಸೇರಿ ಆಚರಿಸಲಾಗುತ್ತಿದೆ.