ಮೂಡಿಗೆರೆ :ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷರಾಗಿ ಚಂದ್ರು ಒಡೆಯರ್ ಜವಾಬ್ದಾರಿ ಸ್ವೀಕಾರ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಪದಾಧಿಕಾರಿಗಳನ್ನು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮೂಡಿಗೆರೆ ಪ್ರವಾಸಿ ಮಂದಿರದಲ್ಲಿ ಸಭೆಯಲ್ಲಿ ನೇಮಿಸಲಾಯಿತು.
ಹೌದು .. ಜವಾಬ್ದಾರಿ ಸ್ವೀಕರಿಸಿ ಮಾತಾನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರು ಒಡೆಯರ್, ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಕಾರ್ಯಕರ್ತರನ್ನು ನೇಮಿಸುವುದಾಗಿ ತಿಳಿಸಿದರು, ಪರಭಾಷೆಯವರ ಆಕ್ರಮಣವನ್ನು ಸಂಘಟನೆ ಖಂಡಿಸುತ್ತದೆ, ಸಂಘಟನೆ ಹುಟ್ಟು ಹಾಕಿದ ಹಿರಿಯರ ಮಾರ್ಗದರ್ಶನದಂತೆ ಕಾರ್ಯ ಚಟುವಟಿಕೆಗಳು ನಡೆಯುತ್ತದೆ.ಯುವ ಮನಸ್ಸುಗಳನ್ನು ಸಂಘಟನೆಗೆ ಸೇರಿಸಿಕೊಂಡು ಸದಸ್ಯತ್ವ ಅಭಿಯಾನ ನಡೆಸಲಾಗುವುದು ಎಂದರು.
ಮೂಡಿಗೆರೆ ತಾಲೂಕು ಗೌರವ ಸಲಹೆಗಾರರಾಗಿ ಸಾಹಿತಿಗಳಾದ ಹಳೇಕೋಟೆ ರಮೇಶ್, ಪತ್ರಕರ್ತ ಅಮರನಾಥ, ಸಮಾಜಸೇವಕಹಸೈನಾರ್ ಬಿಳಗುಳ ಇವರುಗಳನ್ನ ನೇಮಿಸಲಾಯಿತು. ಹಾಗೆ ಗೌರವ ಕಾರ್ಯದರ್ಶಿಗಳಾಗಿ ಮನೋಜಕುಮಾರ್, ಅರುಣಕುಮಾರ್ ಬಿಳಗುಳ, ಗೌರವ ಕೋಶಾಧಿಕಾರಿಯಾಗಿ ದೀಪಿಕಾ ದೀಪಕ್ ಅವರನ್ನ ನಿಯೋಜಿಸಲಾಯಿತು ಹಾಗೆ ಸಂಚಾಲಕರುಗಳಾಗಿ ಆನಂದ ಮರೆಬೈಲ್, ಗೊಣೀಬೀಡು ನವೀನಹಾವಳಿ, ಬಾಳೂರು ಮಧುಕುಮಾರ್ ಕಸಬಾ, ಸಂಜಯ ಕೊಟ್ಟಿಗೆಹಾರ, ಬಣಕಲ್ ಸಂದೇಶ.ಹೆಚ್,ಆರ್ .ಮೂಡಿಗೆರೆ ಹಾಗೂ ಇನ್ನಿತರೇ ವಿಭಾಗಗಳಿಗೆ ಅನಿಲ್ ಛತ್ರಮೈದಾನ, ರಕ್ಷಿತ್ ಬಾಳೂರು, ರಾಜು ಪೂಜಾರಿ ಅಬಚೂರು, ಸುರೇಂದ್ರ ಹಳ್ಳದಗಂಡಿ, ಮಂಜು ವಿವೇಕಾನಂದ ನಗರ, ರಂಜಿತಾ ಹಳೆಮೂಡಿಗೆರೆ, ರೇಖಾ ಹೆಸಗಲ್. ವಿಶ್ವಹಾರ್ಲಗದ್ದೆ, ಅಬ್ದುಲ್ ನಜೀಮ್ ಅವರನ್ನ ಆಯ್ಕೆ ಮಾಡಲಾಯಿತು.