ಕೊಪ್ಪ: ಅಕ್ರಮವಾಗಿ ಸಾಗಿಸುತ್ತಿದ್ದ ಬೀಟೆ ನಾಟಾವನ್ನು ವಶಕ್ಕೆ ಪಡೆದಿರುವ ಘಟನೆ ಕೊಪ್ಪ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಗೋಡಿನಲ್ಲಿ ನಡೆದಿದ್ದು ಮೂವರನ್ನು ಅರೆಸ್ಟ್ ಮಾಡಲಾಗಿದೆ.
ಹೌದು… ಅಂದಾಜು 50 ಸಾವಿರ ಮೌಲ್ಯದ ಬೀಟೆ ನಾಟಾವನ್ನು ಅರಣ್ಯ ಇಲಾಖೆ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದೆ. ಹುಲ್ಲುಕೋಡುಗದ್ದೆಯ ಪ್ರತಾಪ್, ಸಚಿನ್ ಹೇರೂರು, ಶಿವಕುಮಾರ್ ಎನ್ನುವವರ ಮೇಲೆ ಕೊಪ್ಪ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ವೇಳೆ 50 ಸಾವಿರ ಮೌಲ್ಯದ ಬೀಟೆ ನಾಟಾ ಹಾಗೂ ಎರಡು ಬೈಕ್ ಗಳನ್ನು ವಶಪಡಿಕೊಳ್ಳಲಾಗಿದೆ.