ಮೂಡಿಗೆರೆ: ತಾಲೂಕಿನ ನೂತನ ದಂಡಾಧಿಕಾರಿಯಾಗಿ ಶ್ರೀಮತಿ ಅಶ್ವಿನಿ ಅಧಿಕಾರ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಜನತೆ ಈ ಹಿಂದೆ ಇದ್ದ ಅಧಿಕಾರಿಗಳಿಗೆ ನೀಡಿದ ಸಹಕಾರವನ್ನು ನೀಡುವಂತೆ ತಿಳಿಸಿದರು. ಹಾಗೆ ಮೂಡಿಗೆರೆಯ ಅಭಿವೃದ್ಧಿಗೆ ಶ್ರಮಿಸುವ ಭರವಸೆ ಕೂಡ ನೀಡಿದರು.ಅಧಿಕಾರಿಗಳು ಸಾರ್ವಜನಿಕ ಬಂಧುಗಳನ್ನ ಪ್ರೀತಿಯಿಂದ ಕಾಣಬೇಕು ಎಂದರು.

ಹಾಗೆ ವಿವಿಧ ಸಂಘಟನೆ ಅಧ್ಯಕ್ಷರು ಸದಸ್ಯರು ತುಂಬು ಹೃದಯದಿಂದ ನನಗೆ ಸ್ವಾಗತಿಸಿದ್ದು ಎಲ್ಲಾ ಸಂಘಟನೆಯ ಮುಖ್ಯಸ್ಥರಿಗೂ ಧನ್ಯವಾದಗಳು. ಅದರ ಜೊತೆಗೆ ನಿಮ್ಮೆಲ್ಲರ ಸಹಕಾರ ತಾಲೂಕಿನ ಅಭಿವೃದ್ಧಿಗೆ ಬಹಳ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಇಲ್ಲಿಯವರೆಗೂ ಕಾರ್ಯ ನಿರ್ವಹಿಸಿದ ರಾಜಶೇಖರ್ ಮೂರ್ತಿ ಅವರಿಗೆ ತುಂಬು ಗೌರವದಿಂದ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ತಾಲೂಕು ಕಛೇರಿ ಸಿಬ್ಬಂದಿ ವರ್ಗ ಹಾಜರಿದ್ದರು.