ಅರಕಲಗೂಡು: ಹನ್ಯಾಳು ಗ್ರಾಮದ ಮಕ್ಕಳ ಮನೆ ಮಕ್ಕಳಿಗೆ ಶ್ರೀ ಪ್ರಸನ್ನ ವಿರಭದ್ರೇಶ್ವರ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ಕೇರಳಾಪುರ ಅವರಿಂದ ಸರ್ಕಾರಿ ಶಾಲೆಯ ಎಲ್‌ಕೆಜಿಯಿಂದ 10ನೇ ತರಗತಿ ಓದುತ್ತಿರುವ ಮಕ್ಕಳಿ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು!
ಈ ಸಂದರ್ಭದಲ್ಲಿ ಮಕ್ಕಳ ಮನೆ ವಿದ್ಯಾರ್ಥಿಗಳಿಗೆ ಬ್ಯಾಗ್ʼಗಳನ್ನು ಕೊಡುಗೆಯಾಗಿ ನೀಡಿದ ಹೆಚ್ ಪಿ ಈರಪ್ಪ ಅವರ ಮಗಳಾದ ಆಶಾ ಅವರು, ಡಾ. ಅರವಿಂದ ಮೇಡಂ ಅವರಿಗೆ ಶಾಲಾ ವೃಂದದಿಂದ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು, ಎಲ್ಲಾ ಹಿರಿಯ ವಿದ್ಯಾರ್ಥಿಗಳು ಪೋಷಕರು ಹಾಗೂ ಗ್ರಾಮದ ಗ್ರಾಮಸ್ಥರ ಸಹಕಾರದಿಂದಾಗಿ ಇಂದು ಮಕ್ಕಳ ಮನೆಯಲ್ಲಿ 35 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಲ್ಲರ ಸಹಕಾರ ಹೀಗೆ ಇರಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ