Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ: ಸವಿತಾ ಸಮಾಜದ ಮುಖಂಡರ ಪ್ರತಿಭಟನೆ!

ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ: ಸವಿತಾ ಸಮಾಜದ ಮುಖಂಡರ ಪ್ರತಿಭಟನೆ!

ಚಿಕ್ಕಮಗಳೂರು:  ಕ್ಷೌರಿಕ ವೃತ್ತಿಯ ದರಪಟ್ಟಿಯ ದುರ್ಬಳಕೆ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ನಿಗಧಿತ ದರಕ್ಕಿಂತ ಕಡಿಮೆ ದರ ಪ್ರಚಾರ ಮಾಡುತ್ತಿರುವ ವಿರುದ್ಧ ಶ್ರೀರಾಮಮಂದಿರ ಆರ್‍ಯನಯ ನಜ ಕ್ಷತ್ರಿಯ ಸಂಘ ಮತ್ತು ಜಿಲ್ಲಾ ಸವಿತಾ ಸಮಾಜದ ಮುಖಂಡರುಗಳು ನಗರದ ಆಜಾದ್ ಪಾರ್ಕ್ ವೃತ್ತ ದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಪೂರ್ವಜರ ಕಾಲದಿಂದಲೂ ಕ್ಷೌರಿಕ ವೃತ್ತಿಯನ್ನು ಜೀವನದ ಭಾಗವಾಗಿ ಅಲಂಬಿಸಿಕೊಂಡಿದ್ದೇವೆ. ಸವಿತಾ ಸಮಾಜದ ಬಾಂಧವರ ಒಳಿತಿಗಾಗಿ ವೃತ್ತಿಯ ದರಪಟ್ಟಿಯನ್ನು ಸ್ಥಾಪಿಸಿದ್ದು, ಕ್ಷೌರಿಕ ವೃತ್ತಿದಾ ರರು ಈ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಹೊರರಾಜ್ಯದಿಂದ ಕೆಲ ವರನ್ನು ಕರೆತಂದಿರುವ ಬಂಡವಾಳ ಶಾಹಿಗಳು ಕಡಿಮೆ ದರ ನಿಗಧಿಪಡಿಸಿ ಮೂಲ ವೃತ್ತಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕ್ಷತ್ರಿಯ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಎಂ.ಯೋಗೇಶ್ ಮಾತನಾಡಿ ಕ್ಷೌರಿಕ ವೃತ್ತಿಯವರಿಗೆ ಸಮಾಜವು ನಿಗಧಿಪಡಿಸಿ ದರದಲ್ಲೇ ಕೆಲಸ ಮಾಡಲಾಗುತ್ತಿದೆ. ಆದರೆ ಕೆಲವರು ವೃತ್ತಿಯವರ ಹೊಟ್ಟೆಮೇಲೆ ಹೊಡೆದು ಕಡಿಮೆ ದರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿಸುವುದು ಸರಿಯಲ್ಲ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕ್ಷತ್ರಿಯ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಶ್ರೀಧರ್, ತಾಲ್ಲೂಕು ಪ್ರಧಾನ ಕಾ ರ್ಯದರ್ಶಿ ಡಿ.ಶೇಷಾದ್ರಿ, ಖಜಾಂಚಿ ಗಿರೀಶ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯ ಣ್, ಸಮಾಜದ ಮುಖಂಡರುಗಳಾದ ಎನ್.ಸತೀಶ್, ಡಿ.ವೆಂಕಟೇಶ್, ಬಾಲಕೃಷ್ಣಪ್ಪ, ಅಶಕ್, ಲಕ್ಷ್ಮೀ ಕಾಂ ತ್, ವಿ.ಬಿ.ನಾರಾಯಣ್, ಧನರಾಜ್, ಚಂದ್ರಶೇಖರ್, ಬಸವರಾಜ್, ಗೋಗಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!