ಹಾಸನ: ಅಕ್ರಮ ಸಂಬಂಧಕ್ಕೆ ಪತಿ ಅಡ್ಡವಾದ ಹಿನ್ನೆಲೆ ಪತ್ನಿಯೊಬ್ಬಳು ತನ್ನ ಪ್ರಿಯಕರೊಂದಿಗೆ ಸೇರಿ ಪತಿಯನ್ನು ಕೊಳ್ಳಲು ಸಂಚುರೂಪಿಸಿದ ಭಯಾನಕ ಘಟನೆ ಆಲೂರು ತಾಲೂಕಿನ ಪಾಳ್ಯ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ದಾಕ್ಷಾಯಿಣಿ ಎಂಬ ಮಹಿಳೆ ತನ್ನ ಪ್ರತಿ ಪ್ರತಾಪ್ ರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಪ್ರವೀಣ್ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡು ಪತಿ ಪ್ರತಾಪ್ ಅಡ್ಡಿಯಾದ ಹಿನ್ನೆಲೆ ಕೊಲ್ಲಲು ಇಬ್ಬರು ಸ್ಕೆಚ್ ಹಾಕಿದ್ದರು.
ದಾಕ್ಷಾಯಿಣಿ ಮತ್ತು ಪ್ರವೀಣ್ ಇಬ್ಬರು ಸೇರಿ ಪ್ರತಾಪ್ ಕುಡಿಯುವ ಮಧ್ಯ ಮತ್ತು ಊಟದಲ್ಲಿ ವಿಷ ಹಾಕುತ್ತಾ ಪತಿಯನ್ನು ನಿಧಾನವಾಗಿ ಹತ್ಯೆ ಮಾಡುವ ಸಂಚುರೂಪಿಸಿದ್ದರು. ಪ್ರತಾಪ್ ದೇಹದಲ್ಲಿ ವಿಷದ ಅಂಶವನ್ನು ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದರು.
ಪ್ರತಾಪ್ ಗೆ ತನ್ನ ಪತ್ನಿಯ ಮೇಲೆ ಅನುಮಾನ ಬಂದಿದ್ದರಿಂದ ಒಂದು ತಿಂಗಳ ಕಾಲ ಮನೆಯಲ್ಲೇ ವಾಯ್ಸ್ ರೆಕಾರ್ಡರ್ ಇಟ್ಟು ಪತ್ನಿಯ ಮಾತುಕತೆಗಳನ್ನು ರೆಕಾರ್ಡ್ ಮಾಡುತ್ತಿದ್ದನು ಇದರಿಂದಾಗಿ ಪತ್ನಿಯ ದುಷ್ಕೃತ್ಯ ಹಾಗೂ ಪ್ರವೀಣ ಸಹಕಾರದ ವಿಷಯ ಬಯಲಿಗೆ ಬಂದಿದೆ.
ಪ್ರತಾಪ್ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರನ ಮೇಲೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ದಾಕ್ಷಾಯಣಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪ್ರವೀಣ್ ಎಸ್ಕೇಪ್ ಆಗಿದ್ದಾನೆ.
ಪ್ರಕರಣ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಫತ್ತೆಯಾಗಿತುವ ಪ್ರವೀಣ್ʼನನ್ನು ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.