ಎನ್ಆರ್ ಪುರ : ಪಟ್ಟಣದ ಬಸ್ ನಿಲ್ದಾಣದ ಬಳಿ ಮುಖ್ಯ ರಸ್ತೆಯಲ್ಲಿ ಸಂಚಾರದಟ್ಟಣೆ ಹೆಚ್ಚಾಗಿದ್ದು ಖಾಸಗಿ ವಾಹನಗಳು ಬಸ್ ನಿಲ್ದಾಣದ ಆವರಣದಲ್ಲಿ ಪಾರ್ಕಿಂಗ್ ಮಾಡುತ್ತಿರುವ ಕಾರಣ ತೊಂದರೆಯಾಗುತ್ತಿದ್ದು ಖಾಸಗಿ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜುಬೇದ್ ತಿಳಿಸಿದ್ದಾರೆ
ರಸ್ತೆ ಬದಿ ವಾಹನ ನಿಲುಗಡೆ ಮಾಡಲು ಅವಕಾಶ ಇದ್ದರು ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಖಾಸಗಿ ಕಾರು, ಬೈಕುಗಳು ನಿಲ್ಲಿಸುತ್ತಿರುವುದರಿಂದ ಬಸ್ ಗಳನ್ನು ಮುಖ್ಯ ರಸ್ತೆಯಿಂದ ಬಸ್ ನಿಲ್ದಾಣದ ಒಳಗೆ ತೆಗೆದುಕೊಂಡು ಹೋಗಲು ಅಡ್ಡಿ ಉಂಟಾಗುತ್ತಿದೆ ಹಾಗೆ ಬಸ್ ನಿಲ್ದಾಣದಲ್ಲಿ ಅಂಗಡಿಗಳ ಬಾಡಿಗೆದಾರರ ವ್ಯಾಪಾರಕ್ಕೂ ಸಹ ತೊಂದರೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಕೆಲವು ಖಾಸಗಿ ವಾಹನಗಳು ದಿನಗಟ್ಟಲೆ ಬಸ್ ನಿಲ್ದಾಣದ ಆವರಣದಲ್ಲಿ ಬೇಕಾಬಿಟ್ಟಿಯಾಗಿ ನಿಲುಗಡೆ ಮಾಡುತ್ತಿರುವುದು ಕಂಡುಬಂದಿದೆ ಆದ್ದರಿಂದ ಬಸ್ ನಿಲ್ದಾಣದ ಆವರಣದಲ್ಲಿ ಮನವಿ ಮಾಡಲಾಗಿದ್ದು ಯಾವುದೇ ವಾಹನಗಳು ಹೀಗೆ ಬೇಕಾಬಿಟ್ಟಿ ನಿಂತರೆ ದೂರು ಕೊಡಬಹುದು, ತಪ್ಪಿದ್ದಲ್ಲಿ ಪೊಲೀಸರ ಗಮನಕ್ಕೆ ತಂದು ದಂಡ ವಿಧಿಸಲಾಗುವುದೆಂದು ತಿಳಿಸಲಾಗಿದೆ