ಮೂಡಿಗೆರೆ:ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷರಾಗಿ ರವಿ ಹಂತೂರ್, ಕಾರ್ಯದರ್ಶಿಯಾಗಿ ಪೂರ್ಣೇಶ್ ಕಣಚೂರು ಅವರನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ನೇಮಕ ಮಾಡಿದರು..
ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಹಂತೂರ್, ರಾಜ್ಯದ್ಯಂತ ಜಾನಪದ ಕಲೆ ಉಳಿಸಿ ಬೆಳಸುವ ನಿಟ್ಟಿನಲ್ಲಿ ಪ್ರಾಮಾಣಿಕನಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು, ಜಾನಪದ ಕಲೆ ಸಂಸ್ಕೃತಿ ರಾಜ್ಯದ ಹೆಮ್ಮೆ ಪಡುವಂತದ್ದು ನಾವೆಲ್ಲರೂ ಸೇರಿ ಈ ಸಂಸ್ಕೃತಿಯನ್ನು ಕಾಪಾಡಿಕೊಂಡು ಹೋಗಬೇಕು. ಜಾನಪದ ಕಲಾವಿದರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಹಾಗೆ ಕಾರ್ಯದರ್ಶಿ ಪೂರ್ಣೇಶ್ ಮಾತನಾಡಿ, ಸಂಘಟನೆಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ.. ಯುವ ಸಮೂಹ ವನ್ನು ಒಗ್ಗೂಡಿಸಿ ಜಾನಪದ ವನ್ನು ಬೆಳೆಸುವುದಾಗಿ ತಿಳಿಸಿದರು.