ಚಿಕ್ಕಮಗಳೂರು: ಜಿಲ್ಲೆಯ ಮೆಸ್ಕಾಂನ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಹುಕ್ಕುಂದ ಬಳಿ ಚಿಕ್ಕಮಗಳೂರು 66 / 11 ಕಿ.ಮೀ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಜೋಳ್ದಾಲ್ ಫೀಡರ್ 11 ಕೆ.ವಿ. ಮಾರ್ಗಗಳನ್ನು ರೀ ಅಲೈನ್ ಮೆಂಟ್ ಕಾಮಗಾರಿ ನಿರ್ವಹಿಸಲು ಉದ್ದೇಶಿಸಲಾಗಿದೆ.
ಇದರಿಂದ ಜೋಳದಾಳ್ ಫೀಡರ್ ಮತ್ತು ಶಿರವಸೆ ಫೀಡರ್ ಗಳ ವ್ಯಾಪ್ತಿಗೆ ಬರುವ ಹುಕ್ಕುಂದ, ಜೋಳದಾಳ್, ಶಿವಗಂಗೆ, ಸಂತೆಗುಡ್ಡ ಮಸಗಲಿ ಮೈಲಿಮನೆ, ಆವುತಿ, ಮಲ್ಲಂದೂರು, ಜಕ್ಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಜುಲೈ 27 ಮತ್ತು 29 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆವರೆಗೆ ವಿದ್ಯುತ್ ಅಡಚಣೆ ಉಂಟಾಗಲಿದೆ.
ಈ ದಿನಗಳಂದು ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಸಾರ್ವಜನಿಕರು ಸಹಕರಿಸುವಂತೆ ಚಿಕ್ಕಮಗಳೂರು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ