ಮೂಡಿಗೆರೆ: ದಮ್ ಹೊಡೆದ್ರೆ ಒಂದ್ ನಿಮಿಷ ಕಿಕ್ ಅಂತಾರೆ ಧೂಮಪಾನ ಪ್ರಿಯರು ಆದರೆ ಆರೋಗ್ಯಕ್ಕೆ ಅಷ್ಟೇ ಹಾನಿಕರ ಎಂಬುದು ಮಾತ್ರ ಅಷ್ಟೇ ಸತ್ಯ ಅಂತ ಗೊತ್ತಿದ್ರೂ ಸೇದೋದು ಮಾತ್ರ ಈ ಜನ ಬಿಡಲ್ಲ.
ಹೌದು… ಇತ್ತೀಚಿನ ದಿನಗಳಲ್ಲಿ ನೀವು ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿ ಇನ್ನಿತರ ಪದಾರ್ಥಗಳು ಸೆಕೆಂಡ್ ಕ್ವಾಲಿಟಿ ಅಂತ ಹಿಡಿಶಾಪ ಹಾಕುತ್ತಿದ್ದುದ್ದನ್ನ ಕೇಳಿರುತ್ತಿರಿ ನೋಡಿರುತ್ತಿರಿ ಅಬ್ಬಾಬ್ಬಾ ಸಿಗರೇಟ್ ಕೂಡ ಸೆಕೆಂಡ್ ಕ್ವಾಲಿಟಿ ಹಾಗಾಗಿ ತಂಬಾಕು ಪ್ರಿಯರೇ ಎಚ್ಚರ ಇದು ಸತ್ಯ.
ಈಗಷ್ಟೇ ಮಾರುಕಟ್ಟೆಗೆ ಸೆಕೆಂಡ್ ಕ್ವಾಲಿಟಿ ಸಿಗರೇಟ್ ಲಗ್ಗೆ ಇಟ್ಟಿದ್ದು ಧೂಮಪಾನ ಪ್ರಿಯರು ಆರೋಪಿಸಿದ್ದಾರೆ ಈ ಕುರಿತು ತಮ್ಮ ಅನುಭವ ಹಂಚಿಕೊಂಡ ವಿದ್ವಾನ್, ಪ್ರತಿ ದಿನ ಬೆಳಗ್ಗೆ ಬಾತ್ ರೂಮ್ ಹೋಗಲು ಸಹ ನನಗೆ ಧಮ್ ಬೇಕು. ಮೊದಲು ಸಿಗರೇಟ್ ನಲ್ಲಿ ಕಿಕ್ ಇರುತ್ತಿತ್ತು, ಆದರೆ ಈಗ ಮಾರುಕಟ್ಟೆಗೆ ಬಂದಿರುವ ಸೆಕೆಂಡ್ ಕ್ವಾಲಿಟಿ ಸಿಗರೇಟ್ ನಿಂದಾಗಿ ಧಮ್ ಹೊಡೆದ ತ್ರಿಲ್ ಸಿಗುತ್ತಿಲ್ಲ ಎಂದರು
ಆದರೆ ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿದೆ ಕಲಿತ ಚಟ ಬಿಡಲು ಆಗುತ್ತಿಲ್ಲ ಆದ್ರೆ ಇಂತಹ ತಂಬಾಕಿನಿಂದ ಮತ್ತಷ್ಟು ಆರೋಗ್ಯ ಹಾಳಾಗುತ್ತದೆ ಕೆಲ ತಂಬಾಕು ಪ್ಯಾಕ್ ಗಳಲ್ಲಿ ಮೇಡ್ ಇನ್ ಚೀನಾ ಎಂಬುದನ್ನು ಸಣ್ಣದಾಗಿ ಮುದ್ರಿಸಿದ್ದಾರೆ ಯಾವ್ದೋ ಒತ್ತಡದಲ್ಲಿದ್ದಾಗ ಗಮನಿಸದೆ ಧೂಮಪಾನಿಗಳು ಖರೀದಿ ಮಾಡುತ್ತಾರೆ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.